ಪ್ರೀತಿಯ ಅನುಗೆ, ಸ್ನೇಹಾಂಜಲಿ.
ಮೊನ್ನೆ ಮರಿಯಾಪುರದಲ್ಲಿ ಪ್ರತಿವರ್ಷ ನಡೆಯುವ ಧ್ವನಿಬೆಳಕಿನ ಕಾರ್ಯಕ್ರಮದ ಆಮಂತ್ರದ ಪತ್ರಿಕೆಯನ್ನು ನೋಡುತ್ತಿದ್ದಂತೆ ನನ್ನ ಮನಸ್ಸು ಸುಮಾರು 8 ವರ್ಷಗಳ ಹಿಂದೆ ನಾನು ನಿರ್ದೇಶಿಸಿದ ಕಡಿಮೆ ಬಜೆಟ್ಟಿನ ಮತ್ತು ಅಲ್ಪ ಅವಧಿಯ ಧ್ವನಿ ಬೆಳಕಿನ ಕಾರ್ಯಕ್ರಮದ ಕಡೆ ಜಾರಿತ್ತು. ಕಾರ್ಯಕ್ತಮ ಮುಗಿದ ನಂತರ ಮೂಡಿದ ಸುಮಧುರ ನೆನಪುಗಳನ್ನು ಗುಡ್ಡೆ ಮಾಡಿ ಕೈಗೆ ಕೊಟ್ಟು ಇದನ್ನು ನಿನಗಾಗಿ ಬರೆಸಿತ್ತು. ಬರವಣಿಗೆಯಲ್ಲಿ exಣಡಿಚಿoಡಿಜiಟಿಚಿಡಿಥಿ ಅಂತೂ ಏನು ಇಲ್ಲ. ಆದರೂ ನೀನು ಓದಿಕೊಂಡು ಸ್ವಲ್ಪ ಖುಷಿಪಡಬಹುದೆಂಬ ನಂಬಿಕೆಯಿಂದ ನಿನಗೆ ಬರೆಯುತ್ತಿದ್ದೇನೆ.
ಕಾರ್ಯಕ್ರಮ ಆಗಷೇ ಮುಗಿದಿತ್ತು. ಎಲ್ಲವೂ ಮುಗಿಯಿತ್ತು ಎಂದು ನನ್ನ ಮನಸ್ಸು ನಿಟ್ಟುಸಿರುಗರೆಯುತ್ತಾ ಕೂಗಿಕೊಳ್ಳುತ್ತಿದೆ. ಒಂದು ತಿಂಗಳ ಒಡಾಟ, ಕಾದಾಟ, ಕರ್ಷಕತೆಗಳಿಗೆ, ಅವಿರತ ತಾಲೀಮಿಗೆ ತೆರೆ ಬಿದ್ದಿದೆ. ನಿರಾಳದ ಜತೆಗೆ ಒಂದು ರೀತಿಯ ಖುಷಿ, ಸಂತೃಪ್ತಿ ನನ್ನನ್ನು ತುಂಬಿಕೊಂಡಿದೆ. ಭಯ ಮತ್ತು ಡೋಲಾಯಮಾನದ ಮನಸ್ಸಿನಿಂದ ಕೈಗೆತ್ತಿಕೊಂಡಿದ್ದ, ‘ಚೆನ್ನಾಗಿ ಮೂಡಿ ಬರುತ್ತದೆಯೋ ಇಲ್ಲವೋ?’ ಎಂಬ ಅನಿಶ್ಚಿತ ಮನಸ್ಸಿನಿಂದ ಕೈಹಿಡಿದಿದ್ದ ಪ್ರಾಜೆಕ್ಟ್ ಜನರ ನಿರೀಕ್ಷೆಗೂ ಮೀರಿ ಅಂದವಾಗಿ ಮೂಡಿಬಂದಿದೆ. ಇದು ನಾನು ಹೇಳಿತ್ತಿರುವ ಮಾತಲ್ಲ. ಕಾರ್ಯಕ್ರಮವನ್ನು ತದೇಕಚಿತ್ತದಿಂದ ವೀಕ್ಷಿಸಿದ್ದ ಜನರು ನನಗೆ ಖುದ್ದಾಗಿ ಹೇಳಿದ ಪ್ರತ್ಯಾದಾನದ ಮಾತಿದ್ದು. ಹೌದು, ಯಾರ ಪ್ರೇರಣೆಯೋ ಏನೋ ಕ್ರಿಸ್ತನ ಬದುಕಿಗೆ ಕನ್ನಡಿಯಿಡಿಯುವ ಒಂದು ಧ್ವನಿ ಬೆಳಕಿನ ಕಾರ್ಯಕ್ರಮ ಮಾಡೇ ತೀರಬೇಕೆಂಬ ಆಸೆ ನನ್ನಲ್ಲಿ ಮೂಡಿತ್ತು. ಪಾಸ್ಖ ಆಚರಣೆಗೆ ಸುಮಾರು ಒಂದು ಸಾವಿರದಷ್ಟು ಸೇರುವ ಜನರಿಗೆ ಕ್ರಿಸ್ತನ ಬದುಕನ್ನು ಮರುಕಳಿಸುವ ಒಂದು ಕಾರ್ಯಕ್ರಮ ಅವಶ್ಯಕತೆಯೂ ಇತ್ತು. ಆ ಅಸೆಯ ಬಳ್ಳಿಗೆ ಮರವಾಗಿದ್ದು ನಮ್ಮಕೈಗೆಟುಕುವಂತ್ತಿದ್ದ ಕೆಲ ಸವಲತ್ತುಗಳು. ಕಾರ್ಯಕ್ರಮಕ್ಕೆ ಬೇಕಾಗಿದ್ದ ಸಹಜ ಪರಿಸರ, ಹೇಳಿ ಮಾಡಿಸಿದಂತಿದ್ದ ಮಂಟಪ, ಆವರಣ, ಮೈದಾನ, ಜನರೇಟರು, ಗಣಕಯಂತ್ರ ಹೀಗೆ ಸಲಕರಣೆ, ಸಾಧನಸಾಮಾಗ್ರಿಗಳು ನಮ್ಮಲ್ಲಿದ್ದವು. ಸಾಲದಕ್ಕೆ, ಸುಮಾರು 110 ನಮ್ಮ ವಸತಿನಿಲಯ ವಿದ್ಯಾರ್ಥಿಗಳ ಉತ್ತೇಜನವಿತ್ತು. ಇಷ್ಟೆಲ್ಲಾ ಸವಲತ್ತುಗಳಿದ್ದರೂ ಕನಸ್ಸನ್ನು ನನಸಾಗಿಸುವ ಕಾರ್ಯದ ನಡೆ ಮಾತ್ರ ಅಪನಂಬಿಕೆಯಿಂದಲೇ ಪ್ರಾರಂಭಗೊಂಡಿತ್ತು. ಧ್ವನಿಬೆಳಕಿನ ಜೀವಾಳ ಸೌಂಡ್ ಮತ್ತು ಲೈಟಿಂಗ್ ವ್ಯವಸ್ಥೆಯನ್ನು ಎಲ್ಲಿಂದ ತರುವುದು? ಅವುಗಳ ಬಾಡಿಗೆ ಹಣವನ್ನು ಎಲ್ಲಿಂದ ಬರಿಸೋದು? ನಗರದಿಂದ ಸುಮಾರು 35 ಕಿ.ಮೀ ದೂರವಿರುವ ನಮ್ಮ ಕೊಂಪೆಗೆ ಸೇರಬೇಕಂದ್ರೆ ಬರೋಬರಿ 4 ಗಂಟೆಗಳು ಬೇಕು. ಅಷ್ಟು ಕೆಟ್ಟದಾಗಿದ್ದ ರಸ್ತೆಯಲ್ಲಿ ಯಾವ ಭೂಪ ನಮ್ಮ ಹಳ್ಳಿಗೆ ಬರಲು ಒಪ್ಪುವ? ಜತೆಗೆ ನಮ್ಮ ವಿದ್ಯಾರ್ಥಿಗಳಿಗೆ ಧ್ವನಿ ಬೆಳಕಿನ ಬಗ್ಗೆ ಮಾಹಿತಿಯಿರಲಿಲ್ಲ. ಧ್ವನಿ ಬೆಳಕಿನ ಬಗ್ಗೆ ಅವರಿಗೆ ಅರ್ಥಮಾಡಲು ಒಂದು ವಾರವೇ ಬೇಕಾಯ್ತು. ಕೆಲವರಂತೂ ಕಾರ್ಯಕ್ರಮ ಸಾಧ್ಯತೆಯ ಬಗ್ಗೆ ಶಂಕಿಸಿ ‘ಇದು ಅಸಾಧ್ಯದ ಮಾತು’ ಎಂದು ಕಾರ್ಯಕ್ರಮದಿಂದ ದೂರಸರಿದರು. ಅಷ್ಟು ಮಾತ್ರವಲ್ಲ, ತೀವ್ರವಾಗಿದ್ದ ಹಣದ ತೊಡಕು ಬೇರೆ. ಹೀಗೆ ಅನೇಕ ಅನುಕೂಲತೆ ಮತ್ತು ಅನಾನುಕೂಲತೆಗಳ ನಡುವೆ ನಮ್ಮ ಅಭ್ಯಾಸ ಪ್ರಾರಂಭವಾಯ್ತು. ಶಿಲಾಂಗ್ಗೆ ಹೋಗಿ ಸೌಂಡ್ ಮತ್ತು ಲೈಟಿಂಗ್ ಬಗ್ಗೆ ವಿಚಾರಿಸಿದೆ. ಸೌಂಡ್ ಮತ್ತು ಲೈಟಿಂಗ್ ವ್ಯವಸ್ಥೆಗಳ ಉಸ್ತುವರಿ ನೋಡಿಕೊಳ್ಳಲು ಒಪ್ಪಿದ ಮನುಷ್ಯ ಮಾವೈತ್ ಎಂಬ ಹಳ್ಳಿಯ ಹೆಸರನ್ನು ಕೇಳಿದಾಕ್ಷಣ ನನ್ನ ಮೊಬೈಲ್ ಕರೆಯನ್ನು ಸ್ವೀಕರಿಸುವುದೇ ನಿಲ್ಲಿಸಿಬಿಟ್ಟ.
ಇಂದು ಕಾರ್ಯಕ್ರಮ ಮುಗಿದಿದೆ. ಜನರ ನೀರಿಕ್ಷೆ ಮೀರಿದ ಪ್ರದರ್ಶನ ನಮ್ಮ ಹುಡುಗರಿಂದ ಮೂಡಿಬಂದಿದೆ. ಕಂಡಾರಿಯದ ಹೊಸ ಪ್ರಯೋಗವನ್ನು ನೋಡಿ ಸ್ಥಳೀಯರು ಮೂಕವಿಸ್ಮಿತರಾಗಿದ್ದಾರೆ. ನಮ್ಮ ನಿರ್ಮಾಪಕರು ಈ ರೀತಿಯ ಕಾರ್ಯಕ್ರಮವನ್ನು ಪ್ರತಿ ವರ್ಷ ಮಾಡಬೇಕೆಂದು ಆಗಾಗ ಹೇಳುತ್ತಿದ್ದಾರೆ. ನಮ್ಮ ಮನೆಗೆ ಬಂದಿರುವ ಫಾ. ಅರುಳ್ ಇನ್ನೀತರ ಸ್ಥಳಗಳಲ್ಲೂ ಪ್ರದರ್ಶನ ನೀಡಬಹುದೆಂಬ ಸಲಹೆ ನೀಡುತ್ತಿದ್ದಾರೆ. ಊರಿನ ಜನರು ಮತ್ತೊಂದು ಪ್ರದರ್ಶನಕ್ಕೆ ದಂಬಲು ಬಿದ್ದಿದಾರೆ. ನಾಟಕ ತಾಲೀಮಿನ ಮಧ್ಯೆ, ಕೈಕೊಟ್ಟು ಓಡಿ ಹೋದವರು ಶೋ ನೋಡಿದ ನಂತರ ನಾವು ಕೂಡ ನಾಟಕದಲ್ಲಿ ಭಾಗವಹಿಸಬೇಕಿತ್ತು ಎಂಬ ವಿಷಾದದ ಮಾತುಗಳನ್ನಾಡುತ್ತಿದ್ದಾರೆ. ಧ್ವನಿಬೆಳಕಿನ ಕಾರ್ಯಕ್ರಮದ ಬಗೆಗಿನ ನನ್ನ ಅರಿವು ಹಿಮ್ಮಡಿಯಾಗಿದೆ. ದೊಡ್ಡ ಮೇಷ್ಟ್ರುವೆಂಬ ಅಗಾಧ ಪ್ರತಿಭೆ ನನ್ನ ಪರಕಾಯ ಪ್ರವೇಶ ಮಾಡಿ ಮಾವೈತ್ ಎಂಬ ಕೊಂಪೆಯಲ್ಲಿ ಜೀವಂತವಾಗಿಬಿಟ್ಟಿದ್ದರು ಎಂದು ನನ್ನ ಮನಸ್ಸು ಹೇಳುತ್ತಿದೆ.
ಕೊನೆಗೆ ಹೇಳುವುದಿಷ್ಟೇ. ಇದು ನನಗಾದ ಪಾಸ್ಖ ಅನುಭವ. ಅಸಾಧ್ಯವಾಗಿದ್ದು ಸಾಧ್ಯವಾದ ಪುನರುತ್ಥಾನದ ಅನುಭವ. ಈ ಅನುಭವಕ್ಕೆ ಅನು ಮಾಡಿಕೊಟ್ಟ ಪ್ರತಿಯೊಬ್ಬರು; ನಮ್ಮ ವಸತಿನಿಲಯದ ಹುಡುಗ ಹುಡಿಗಿಯರು, ಬೆನ್ನೆಲುಬಾಗಿ ನಿಂತ ಆತ್ಮೀಯ ಪೌಲ್ ಮತ್ತು ಜೂಜೆಯವರು, ಲೈಟಿಂಗ್ ಬಗ್ಗೆ ಪೆÇೀನ್ ಮೂಲಕ ಆಗಾಗ ಸಲಹೆ ಸೂಚನೆಗಳನ್ನು ನೀಡುತ್ತಿದ್ದ ನನ್ನ ಚಿಕ್ಕಪ್ಪ ಚಿನ್ನರವರು, ನಿರ್ಮಾಪಕ ಫಾ. ರಾಬರ್ಟ ಹಾಗು ಫಾ. ಗೆಬ್ರಿಯಲ್, ಸಿಸ್ಟರ್. ನತಲಿಸ್‍ರವರು, ಕಾರ್ಯಕ್ರಮವನ್ನು ಕಂಡು ನನ್ನ ಬೆನ್ನು ತಟ್ಟಿದವರು, ಬೆರಗು ಕಣ್ಣುಗಳಿಂದ ಕ್ರಿಸ್ತನ ಮಹಿಮೆಯನ್ನು ವೀಕ್ಷಿಸಿದ್ದ ಮಾವೈತ್ ಜನರು ನನ್ನಲ್ಲಿ ಆಗಾಗ ಜೀವಂತಗೊಳ್ಳುತ್ತಿರುತ್ತಾರೆ.
ಈ ರೀತಿಯ ಇನ್ನೊಂದು ಪ್ರಯೋಗ ಮಾಡಬೇಕೆಂಬ ಆಸೆ ಮೊಳಕೆಯೊಡೆಯುತ್ತಿದೆ. ಕಾಲ ಕೂಡಿ ಬಂದಾಗ ಖಂಡಿತವಾಗಿಯೂ ಪ್ರಯತ್ನಿಸಿ ಪ್ರಯೋಗದ ಬಗ್ಗೆ ವಿವರವಾದ ವಿಸ್ತೃತ ಅನುಭಾವವನ್ನು ನಿನ್ನ ಮುಂದೆ ಖಂಡಿತವಾಗಿಯೂ ಇಡುತ್ತೇನೆ,
ಧನ್ಯವಾದಗಳು
ಇಂತಿ ನಿನ್ನವ
ಆನಂದ್
No comments:
Post a Comment