ಪ್ರೀತಿಸುವುದಾದರೆ
ಅಸ್ತ್ರಗಳನು ಕೆಳಗಿಟ್ಟು ಬಿಡು ಪ್ರೀತಿಸುವುದಾದರೆ
ದ್ವೇಷವನು ಮರೆತು ಬಿಡು ಪ್ರೀತಿಸುವುದಾದರೆ
ಎಷ್ಟೊಂದು ಲೆಕ್ಕಿಸುವೆ ಕೂಡಿಸು ಗುಣಿಸು ಆದರೆ
ಭಾಗಿಸುವುದು ಬಿಟ್ಟು ಬಿಡು ಪ್ರೀತಿಸುವುದಾದರೆ
ಯಾವುದು ನಿನ್ನದಲ್ಲವಾದರೆ ಯಾಕೀ ಬಿಗುಮಾನ
ನನ್ನದೆನುವುದನು ಬಿಡು ಪ್ರೀತಿಸುವುದಾದರೆ
ಕೊಟ್ಟಿದ್ದು ಕೆಡಲಿಲ್ಲ ಕಟ್ಟಿಡಲಾಗಿದೆ ಕಾಣೋ
ಹೋಗಿದ್ದು ಹೋಗಲು ಬಿಡು ಪ್ರೀತಿಸುವುದಾದರೆ
ಯುದ್ಧವೇ ಇಲ್ಲ ಬಿಡು ನಿನ್ನ ನೀನು ಗೆದ್ದ ಮೇಲೆ
ಸೋಲನು ಬರಲು ಬಿಡು ಪ್ರೀತಿಸುವುದಾದರೆ
ಉಮರ್ ದೇವರಮನಿ
No comments:
Post a Comment