Friday, 18 December 2020

ರೈತರು - ಡೇವಿಡ್ ಕುಮಾರ್.ಎ.

 ರೈತರು

ಹಸಿರು ಬಿತ್ತಿ

ತಂಗಾಳಿ ಬೆಳೆವವರು

ಇಂದು ಉಸಿರುಗಟ್ಟಿ

ಬಿರುಗಾಳಿಯಾದರು!

 ಮೈಯ ಬೆವರು ಆವಿಯಾಗಿ

ಮಳೆಯಾಗಿ ಇಳೆಗಿಳಿದು

ಹನಿಗೂಡಿ ಹೊಳೆಯಾಗಿ

ಕ್ರಾಂತಿಯ ಕಡಲಾದರು


ನನ್ನಿರುವು ನನ್ನಿಯೇ !

 ಭೇಟಿಯಾದೊಡನೆ ನನ್ನಿರುವು ಹುಟ್ಟಿಸುವುದವರಲಿ ದಿಗಿಲುಗಳು

ನಾನೊಳ ಬಂದೊಡನೆ ಮುಚ್ಚುವರವರು ಕಿಟಕಿಬಾಗಿಲುಗಳು

ಅತಿಥಿಗಳ ಸಾಗಹಾಕುವರು ಲಗುಬಗನೇ

ನನ್ನ ಮಾತವರಿಗೆ ಬೇಡ ಸುಕಾಸುಮ್ಮನೆ

ಅತ್ತಿತ್ತ ನೋಡಿ ಬಾಯಿ ಹೊಲಿದುಕೊಳುವರು ಆತಂಕದಿಂದ

ನನ್ನ ತೊಲಗಿಸುವ ಉಪಾಯ ಹೂಡುವರು ಧಾವಂತದಿಂದ

ಮೊಬೈಲ್ ಸಂದೇಶ ಕಳಿಸುವರವರು ಮೇಜಿನಡಿಯಿಂದ

ನಾ ಬಂದೆನೆಂದು ತಿಳಿಸುವರಾರಿಗೋ ದೇವರೇ ಬಲ್ಲ

ಫೆÇೀಟೋ ಕ್ಲಿಕ್ಕಿಸುವರು ನನ್ನೊಂದಿಗೆ

ಓಡಿಹೋಗುವರು ಸೆಲ್ಫೀಯೊಂದಿಗೆ

ನನ್ನ ದನಿ ಅವರಿಗೆ ವಿಚಿತ್ರ ಕಿರುಲು

ತಲೆಯ ಮೇಲೆನ್ನ ಕೊಂಬು ಮೂಡಿಸಿಹರು

ವಿಚಿತ್ರಮೃಗದಂತೆ ನನ್ನ ಬದಲಿಸಿಹರು

 (ಪೆರುಮಾಳ್ ಮುರುಗನ್ ಅವರ ಕವಿತೆ ಅನುವಾದ ಸಿ ಮರಿಜೋಸೆಫ್)

ಗಾರ್ದಭ ಒಸಗೆ - ಎಫ್.ಎಂ.ಎನ್

 


ನಾನು, ಅದೇ ಮೂಗ, ಮೂಗ ಗಾರ್ದಭ.

ಹಿಮದಲಿ ನಡೆಯುತ, ಚಳಿಯಲಿ ನಡಗುತ,

ಹಿಂದೆ ಎರಡು ಸಹಸ್ರ ವರುಷಗಳ ಹಿಂದೆ,

ಪುಟಾಣಿ ಪಟ್ಟಣ ಬೆತ್ಲೆಹೇಮ್ ಮುಟ್ಟಿದವ.

 

ಮತ್ತೆ ಕತ್ತೆ ಕತ್ತೆ  ಏನೊಂದು ಕೆಲಸಕ್ಕೆ ಬಾರದು,

ಎಂದು ಹಂಗಿಸಿ ಜರೆಯುವುದು ನನ್ನ, ಈ ಜಗವು.

ಆದರೂ, ಹೊರಲಾರದ ಹೊರೆ ಹೊರೆಸಿ, ಹೊರಸಿ,

ಸಾಗುವರು ಕಲ್ಲುಮುಳ್ಳಿನ ದುರ್ಗಮ ಹಾದಿಯಲಿ.

 

ಹೊಡೆತ, ಬಡಿತ, ಒದೆತ, ಬೈಗುಳದ ಬಾಳು.

ಒಂದು ಮಾತನೂ ಆಡದ ನಾನೊಬ್ಬ ಕೆಪ್ಪ,

ಮಡಿವಾಳನ ಮನೆ ಸೇರದವ, ಕೆರೆ ಕಾಣದವ,

ಯಾರೇ ಕೂಗಾಡಿದರೂ ಸುಮ್ಮನಿರುವ ಬೆಪ್ಪ.

 

ಆದರೂ, ನನ್ನದೂ ಅಂತ ರಹಸ್ಯವೊಂದಿದೆ,

ಪವಿತ್ರ ಮೌನದ ರಾತ್ರಿಯ ಕತೆಯೊಂದಿದೆ.

ಪುನೀತ ಕುಟುಂಬವನು ದಡ ಮುಟ್ಟಿಸಿದ್ದು,

ಈ ಬೈಗುಳ ತಿನ್ನುವ ಬಡಪಾಯಿ ಕತ್ತೆ, ಕತ್ತೆ.

 

ಗೊತ್ತಾ ಎನ್ನ ಸಂತೋಷ, ಸಂತಸದ ಗುಮಿತ,

ಆ ಪವಿತ್ರ ಮೌನದ ರಾತ್ರಿ, ಜಗವೆಲ್ಲ ಮಲಗಿತ್ತು.

ಪುನೀತ ಕುಟುಂಬ ಕೊಟ್ಟಿಗೆಯಲ್ಲಿ ತಂಗಿತ್ತು

ಕೊಟ್ಟಿಗೆಯ ಮೇಲೆ ತಾರೆಯೊಂದು ಬೆಳಗಿತ್ತು

 

ಹಸುಗೂಸಿನಲಿ ಅರಸನ ಕಾಣಲು ಬಂದಿತ್ತು,

ಸುಮ್ಮನಸ್ಸ್ಸುಗಳ ದೊಡ್ಡದಾದ ದಂಡೆ ಬಂದಿತ್ತು.

ಮೂರು ರಾಯರ ತಂಡ ಭೇಟಿಗಾಗಿ ಕಾದಿತ್ತು

ಕುರುಬರ, ದನುಕರುಗಳ ಗುಂಪು ನೆರೆದಿತ್ತು.

 

ಪವಿತ್ರ ಮೌನದ ರಾತ್ರಿಯಲಿ, ಆ ಸರಿ ರಾತ್ರಿಯಲಿ

ದಟ್ಟಿಯ ಹೊತ್ತ ಹಸುಗೂಸು ಹುಲ್ಲಲಿ ಮಲಗಿತ್ತು.

ಯಾರು ಏನಾದರು ಅಂದುಕೊಳ್ಳಲಿ, ಬೈಯಲಿ

ಜಗನ್ನಿಯಾಮಕನ ಹೊತ್ತ ಎನಗೆ ಬೇಸರವಿಲ್ಲ

 

ಅಂದಿನಿಂದ ಚಿಂತೆಯೂ ಇಲ್ಲ, ಭಯವೂ ಇಲ್ಲ.

ಜರಿದಾಡುವವರ ಮಾತಿನ ಗೊಡವೇ ಎನಗಿಲ್ಲ.

ಹೆರೋದರಸನ ಕಣ್ಣು ತಪ್ಪಿಸಿ ದಾಟಿಸಿದೆ ಗಡಿಯ

ಐಗುಪ್ತ ದೇಶವ ಮುಟ್ಟಿತು ಪುನೀತ ಕುಟುಂಬವು

 

ಐಸಲೇ, ಅಲ್ಲವೇ ಅಲ್ಲ, ಅದೊಂದು ಅದೃಷ್ಟದ ದಿನ,

ರಾಜಾಧಿರಾಜ, ಜಗದ ರಕ್ಷಕನ ಹೊತ್ತು ಸಾಗಿದ ದಿನ

ಬೆನ್ನು ಸಿಂಹಾಸನವಾದ ದಿನ, ಮರೆಯಲಾಗದ ದಿನ

ಹಸಿರೆಲೆ ಹಾಸಿ, ಉಘೇ ಉಘೇ ಎಂದರು ಸಕಲ ಜನ

 



ದ ಆರ್ಡರ್ ಆಫ್ ಥಿಂಗ್ಸ್ : ಬದುಕು, ಕೆಲಸ ಮತ್ತು ಭಾಷೆಗಳ ಬೇರುಗಳ ಜೀವನ ರಚನಾಕ್ರಮದ ಅಧ್ಯಯನ - ಯೊಗೇಶ್ ಮಾಸ್ಟರ್, ಬೆಂಗಳೂರು

 


-------------------------

ವೈಚಾರಿಕತೆಯು ಯಾರೊಬ್ಬರ ಇಷ್ಟ ಮತ್ತು ಇಷ್ಟವಿಲ್ಲದಿರುವುದರ ಮೇಲೆ ಅವಲಂಬಿತವಾಗಕೂಡದು. ವೈಚಾರಿಕತೆಯಾಗಲಿ, ತಾತ್ವಿಕತೆಯಿಂದ ವಿಚಾರಗಳು ರೂಪುಗೊಳ್ಳುವುದಾಗಲಿ ಅದಕ್ಕೆ ವೈಜ್ಞಾನಿಕವಾದಂತಹ ಕ್ರಮ ಬೇಕು. ಇದನ್ನು ಫೂಕೋ ಸ್ಪಷ್ಟಪಡಿಸುತ್ತಾರೆ.

-----------------------------------

ಮನುಷ್ಯನಿಂದಾದ ವಸ್ತು, ವಿಷಯ ಮತ್ತು ವ್ಯವಸ್ಥೆಗಳೆಲ್ಲವೂ ಕಾಲ ಕ್ರಮೇಣ ರೂಪಾಂತರಗಳನ್ನು ಹೊಂದುತ್ತಿರುತ್ತವೆ. ಅದು ಸಹಜ ಮತ್ತು ಅಪೇಕ್ಷಣೀಯ. ಮನುಷ್ಯನಾಗಲಿ, ಅವನು ಸಮೂಹದಲ್ಲಿ ವಾಸಿಸುವ ಸಮಾಜವಾಗಲಿ ಬದಲಾವಣೆಗೆ ಹೊರತಲ್ಲ. ಏಕೆಂದರೆ ಎರಡೂ ಜೀವಂತವಾಗಿರುವವು. ಬೆಳವಣಿಗೆ ಜೀವಂತಿಕೆಯ ಲಕ್ಷಣ. ಆದರೆ ಸಮಸ್ಯೆ ಎಂದರೆ ಮನುಷ್ಯ ತಾನೇ ಸೃಷ್ಟಿಸಿದ ಅಥವಾ ರಚಿಸಿದ ವಸ್ತುಗಳನ್ನು, ವಿಷಯಗಳನ್ನು ಮತ್ತು ವ್ಯವಸ್ಥೆಗಳನ್ನು ತಾನೇ ಅರ್ಥ ಮಾಡಿಕೊಳ್ಳಲು ತುಂಬಾ ಶ್ರಮಪಡಬೇಕಾಗುತ್ತದೆ. ಈ   ಶ್ರಮದಿಂದ ತಪ್ಪಿಸಿಕೊಳ್ಳಲು ಅವನು ಮಾಡುವ ಮೊದಲ ಕೆಲಸವೆಂದರೆ ಮೊದಲಿನವರು ಏನು ಅರ್ಥವನ್ನು ನೀಡಿರುತ್ತಾರೋ ಅಥವಾ ಹೇಗೆ ವ್ಯಾಖ್ಯಾನಿಸಿರುತ್ತಾರೋ ಅದನ್ನೇ ಒಪ್ಪಿಕೊಂಡು ಹೋಗಿಬಿಡುವುದು. ಸ್ವಲ್ಪ ಗಮನಿಸಿ, ಬದಲಾವಣೆಗೆ ಒಳಗಾಗಿರುವುದನ್ನು ಹಳೆಯ ದೃಷ್ಟಿಯಲ್ಲಿ ಅರ್ಥ ಮಾಡಿಕೊಳ್ಳುವುದರಿಂದ ಬರೀ ಅಪಾರ್ಥವಾಗುವುದಲ್ಲ, ಅನರ್ಥವಾಗುತ್ತದೆ.

ಸುಮ್ಮನೆ ಅರ್ಥ ಮಾಡಿಕೊಳ್ಳಲು ಈ ಉದಾಹರಣೆ. ನಾನು ಮೂರು ವರ್ಷದವನಿದ್ದಾಗ ಹಾಕಿಕೊಳ್ಳುತ್ತಿದ್ದ ಉಡುಪೆÇಂದು ಈಗ ಐವತ್ತೆರಡು ವಯಸ್ಸಿನಲ್ಲಿ ಹಳೆ ಪೆಟ್ಟಿಗೆಯಲ್ಲಿ ಕೈಗೆಟುಕಿತು. ಅದನ್ನು ಈಗ ತೊಟ್ಟುಕೊಳ್ಳಲು ಯತ್ನಿಸಿದರೆ? ಅದು ಆಗದು. ನಾನು ಬಿಡೆನು. ಏಕೆಂದರೆ ಅದು ನನ್ನದೇ. ನಾನೇ ತೊಟ್ಟುಕೊಳ್ಳುತ್ತಿದ್ದೆ. ಈಗಾಗುವುದಿಲ್ಲ ಎಂದರೆ ಏನರ್ಥ? ಸರಿ, ಇನ್ನೊಂದು ಬಗೆಯಿಂದ ನೋಡೋಣ. ಮೂರು ವರ್ಷದ ಹುಡುಗನಾಗಿದ್ದನ ನನ್ನ ಬಟ್ಟೆ ಬಹಳ ಸೊಗಸಾಗಿದೆ. ಓಲ್ಡ್ ಈಸ್ ಗೋಲ್ಡ್. ಆ ಬಟ್ಟೆಗೆ ಹೊಂದಿಕೊಳ್ಳಲು ನಾನು ಪ್ರಯತ್ನಗಳನ್ನು ಮಾಡುತ್ತೇನೆ.

ಸಮಾಜವನ್ನು ಕುರಿತಂತೆ ಮನುಷ್ಯನ ವ್ಯಕ್ತಿಗತವಾದ ದೃಷ್ಟಿಯು, ವ್ಯಕ್ತಿಯನ್ನು ಕುರಿತಂತೆ ಸಮಾಜದ ದೃಷ್ಟಿಯು ಮೇಲಿನ ಉದಾಹರಣೆಯಂತಾಗಿಬಿಟ್ಟರೆ ಹೇಗೆ? ಕಾಲದಿಂದ ಕಾಲಕ್ಕೆ ಒಂದು ಕ್ರಮದಲ್ಲಿ ಮನುಷ್ಯನಲ್ಲಿ ದೈಹಿಕವಾದ, ಮಾನಸಿಕವಾದ, ಬೌದ್ಧಿಕವಾದ ಮತ್ತು ಭಾವನಾತ್ಮಕವಾದಂತಹ ಬದಲಾವಣೆಗಳು ಹೇಗೆ ಆಗುತ್ತಿರುತ್ತದೆಯೋ ಅದೇ ರೀತಿಯಲ್ಲಿ ಸಮಾಜದಲ್ಲಿಯೂ ಕೂಡಾ ಇಂತಹ ಬದಲಾವಣೆಗಳು ಆಗುತ್ತಿರುತ್ತವೆ.

ಅಂತಹ ಜೈವಿಕ ಮತ್ತು ಮಾನಸಿಕವಾದಂತಹ ಸಂಗತಿಗಳ ಕ್ರಮಗಳನ್ನು ವ್ಯಕ್ತಿಯ ಮತ್ತು ಸಮಾಜದ ಪ್ರಕಾರ ಅರಿತುಕೊಳ್ಳಲು ಫುಕೋ ಅವರ ‘ದ ಆರ್ಡರ್ ಆಫ್ ದ ಥಿಂಗ್ಸ್’ ನೆರವಾಗುತ್ತದೆ.

ಸಾಮಾನ್ಯ ಸಂಗತಿಗಳನ್ನು ತಾತ್ವಿಕಗೊಳಿಸಿ ಸೈದ್ಧಾಂತಿಕವಾಗಿ ಮಾತಾಡುವ ಬಗೆಯಲ್ಲ ಈ ಪುಸ್ತಕ. ಮನುಷ್ಯನ ಬದುಕು, ಕೆಲಸ ಮತ್ತು ಭಾಷೆಗಳ ಬೇರುಗಳಿಂದ ಮೂಡಿರುವಂತಹ ಜೀವನದ ರಚನಾಕ್ರಮವನ್ನು ಫುಕೋ ಅರಿತುಕೊಳ್ಳಲು ಯತ್ನಿಸುತ್ತಾರೆ. ಯಾರೊಬ್ಬನ ಜೈವಿಕತೆ, ಆರ್ಥಿಕತೆ ಮತ್ತು ಭಾಷಿಕ ಪ್ರಭಾವಗಳು ಅವನ ಬದುಕನ್ನು ರೂಪಿಸುವುದರಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂಬುದನ್ನು ಚರ್ಚಿಸುತ್ತಾರೆ.

ಚಿತ್ರರಚನೆಯನ್ನು ವಿವರಿಸುವುದರಿಂದ ಪ್ರಾರಂಭವಾಗುವ ಈ ಪುಸ್ತಕ, ಚಿತ್ರವು ನೇರವಾಗಿ ಕಣ್ಣಿಗೆ ಹೇಗೆ ಕಾಣುತ್ತದೆ, ಅದು ಏನನ್ನು ಅಡಗಿಸಿಟ್ಟುಕೊಂಡಿದೆ ಮತ್ತು ಅದು ಯಾವ ವಿಷಯದ ಕಡೆಗೆ ವಾಲುತ್ತದೆ ಎಂಬುದನ್ನು ಚರ್ಚಿಸುತ್ತದೆ.

ಅದೇ ರೀತಿ ಚರಿತ್ರೆಯ ವಿವಿಧ ಕಾಲಘಟ್ಟಗಳೂ ಕೂಡಾ ಅನೇಕ ಸಂಗತಿಗಳನ್ನು ತನ್ನಲ್ಲಿ ಅವಿತಿಟ್ಟುಕೊಂಡಿರುವುದರ ಬಗ್ಗೆ ಬೆಳಕು ಚೆಲ್ಲುತ್ತಾರೆ. ನಿಜಕ್ಕೂ ಕಾಣುವ, ಕೇಳುವ, ನೋಡುವ, ಓದುವ ಸಂಗತಿಗಳು ಹೊರನೋಟಕ್ಕೆ ಕಾಣುವಷ್ಟೇ ಆಗಿರುವುದಿಲ್ಲ ಎಂಬುದಂತೂ ಸ್ಪಷ್ಟ. ವಿಚಾರ ಮಾಡುತ್ತಾ ವಿವಿಧ ಆಯಾಮಗಳಲ್ಲಿ ನೋಡಲು ಯತ್ನಿಸಿದರೆ ಗ್ರಹಿಕೆಗೆ ಒಂದಷ್ಟು ನ್ಯಾಯ ಸಿಗಬಹುದು.

ವೈಚಾರಿಕತೆಯು ಯಾರೊಬ್ಬರ ಇಷ್ಟ ಮತ್ತು ಇಷ್ಟವಿಲ್ಲದಿರುವುದರ ಮೇಲೆ ಅವಲಂಬಿತವಾಗಕೂಡದು. ವೈಚಾರಿಕತೆಯಾಗಲಿ, ತಾತ್ವಿಕತೆಯಿಂದ ವಿಚಾರಗಳು ರೂಪುಗೊಳ್ಳುವುದಾಗಲಿ ಅದಕ್ಕೆ ವೈಜ್ಞಾನಿಕವಾದಂತಹ ಕ್ರಮ ಬೇಕು. ಇದನ್ನು ಫೂಕೋ ಸ್ಪಷ್ಟಪಡಿಸುತ್ತಾರೆ. ವೈಜ್ಞಾನಿಕ ಕ್ರಮವಿಲ್ಲದ, ಗಮನ ಮತ್ತು ಅಧ್ಯಯನವಿಲ್ಲದ ತಾತ್ವಿಕತೆಗಳು ಅಥವಾ ವೈಚಾರಿಕತೆಗಳು ವ್ಯಕ್ತಿಗತ ಒಲವು ನಿಲುವುಗಳಿಂದ ಪ್ರಭಾವಗೊಂಡಿರುತ್ತವೆ. ಸಾಮಥ್ರ್ಯ ಮತ್ತು ದೌರ್ಬಲ್ಯಗಳ ಮೇಲೆ ಆಧರಿಸಿದ ಆ ಸಂಗತಿಗಳಿಗೆ ಮಾನವಶಾಸ್ತ್ರ ನ್ಯಾಯವನ್ನು ಒದಗಿಸುವುದಿಲ್ಲ.

ಇಂತಹ ಸಂಗತಿಗಳು ಊಹೆಗಳ, ಕಲ್ಪನೆಗಳ ಮೇಲೆ ಆಧಾರವಾಗಿಬಿಟ್ಟಲ್ಲಿ ಅವುಗಳ ಮೂಲವಾಗಿರುವ ಮನಸ್ಸಿನ ಆರೋಗ್ಯದ ಬಗ್ಗೆ ಯಾರೊಬ್ಬರಾದರೂ ಖಚಿತತೆಯಲ್ಲಿ ಹೇಗೆ ಪ್ರಮಾಣೀಕರಿಸುತ್ತಾರೆ? ವ್ಯಕ್ತಿಯೊಬ್ಬನ ಸಂಗತಿಗಳ ಮನೋವಿಶ್ಲೇಷಣೆಯಂತೆ ಸಮಾಜದ ಮತ್ತು ಚರಿತ್ರೆಯ ವಿವಿಧ ಕಾಲಘಟ್ಟಗಳ ಸಂಗತಿಗಳ ಮನೋವೈಜ್ಞಾನಿಕ ವಿಶ್ಲೇಷಣೆ ಅಗತ್ಯವಾಗಿದೆ. ಮನೋವೈಜ್ಞಾನಿಕ ಚಟುವಟಿಕೆಗಳೇ ಚರಿತ್ರೆಯಲ್ಲಿ ವಸ್ತುಗಳನ್ನು, ಸಂಗತಿಗಳನ್ನು, ವ್ಯವಸ್ಥೆಗಳನ್ನು ರೂಪಿಸಿರುವುದು. ಹಾಗೆಯೇ ಗಮನದಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ಅಂಶವೇನೆಂದರೆ ಹಿಂದಿನ ಸಂಗತಿಗಳನ್ನು ಆ ಕಾಲಘಟ್ಟದಲ್ಲಿ ವಿಶ್ಲೇಷಿಸಿದ ರೀತಿಯ ಮನಸ್ಥಿತಿಯಲ್ಲಿಯೇ ಇಂದಿಗೂ ನಾವು ವಿಶ್ಲೇಷಿಸುವ ಅಗತ್ಯ ಇಲ್ಲ, ಕಾರಣವೂ ಇಲ್ಲ. ಮೊದಲಿಗೆ ಅದು ಕ್ರಮವೂ ಅಲ್ಲ. ಏಕೆಂದರೆ ಮುಂದುವರಿದು ಅದನ್ನು ಹೊರಗಿನಿಂದ ನೋಡುವ ಸಾಧ್ಯತೆ ಮಾತ್ರವಲ್ಲದೇ ಅದಕ್ಕಿಂತಲೂ ವಿಕಸಿತವಾಗಿರುವ ಮನಸ್ಥಿತಿಯು ನಮ್ಮದಾಗಿರುತ್ತದೆ. ಆದರೆ ಅದರ ಮುಂದುವರಿದ ಭಾಗವಾಗಿರುವ ನಮ್ಮ ಮನೋರಂಗದಲ್ಲಿ ಆ ಸಂಗತಿಗಳು ಸುಪ್ತವಾಗಿರುತ್ತವೆ.

ಫುಕೋ ಅವರ ಈ ಕೃತಿಯನ್ನು ಓದುವಾಗ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ನೆನಪಿಗೆ ಬರುವುದು ಸಹಜ. ಮನೋವೈಜ್ಞಾನಿಕ ವಿಶ್ಲೇಷಣೆಯಲ್ಲಿ ಸಂಗತಿಗಳನ್ನು ಚರ್ಚಿಸುವಾಗೆಲ್ಲಾ ಫ್ರಾಯ್ಡ್ ಅವರ ಮನೋವ್ಯಾಪಾರದ ಮೂರು ಕೇಂದ್ರಗಳಾದ ಜಾಗೃತಿ ಚೇತನ, ಸುಪ್ತ ಚೇತನ ಮತ್ತು ಅತಿಸುಪ್ತ ಚೇತನಗಳು ತಮ್ಮ ಜಾಡನ್ನು ಮೂಡಿಸಿವೆ.

ಒಬ್ಬನ ಬದಲಾಗುವ ಭಾಷೆ, ಜೈವಿಕ ವಿಕಾಸ, ಪ್ರಭಾವ ಬೀರುವ ಆರ್ಥಿಕ ನೀತಿಗಳು ಮತ್ತು ಚಟುವಟಿಕೆಗಳು ವ್ಯಕ್ತಿಗತ ಅಸ್ತಿತ್ವದ್ದೇ ಆದರೂ ಅದು ಅಂತಹ ವ್ಯಕ್ತಿಗಳ ಸಮೂಹವಾದ ಸಮಾಜದಲ್ಲಿ ತನ್ನ ಛಾಪನ್ನು ಮೂಡಿಸುತ್ತದೆ ಎಂಬುದನ್ನು ಮರೆಯಲಾಗದು.

ಫುಕೋ ಅವರು ಫ್ರೆಂಚ್ ಭಾಷೆಯಲ್ಲಿ ಬರೆದ ಪುಸ್ತಕವಾದರೂ ಭಾರತದ ಸಾಮಾಜಿಕ ಸ್ಥಿತಿಗತಿಗೆ ಮತ್ತು ವ್ಯವಸ್ಥೆಗೆ ಅನ್ವಯ ಮಾಡಿಕೊಳ್ಳಲು ಕಷ್ಟವೇನಾಗದು. ಮನುಷ್ಯ, ಅವನ ಸಮಾಜ ಹಾಗೂ ವ್ಯವಸ್ಥೆಗಳ ಆಲೋಚನೆ ಮತ್ತು ವ್ಯವಹಾರಗಳ ಮೂಲ ಪ್ರೇರಣೆಗಳಂತೂ ಸಾರ್ವತ್ರಿಕವಾಗಿಯೇ ಇವೆ.

ಫೂಕೋ ವಿಚಾರಗಳ ಉದಾಹರಣೆಗಳು ಕ್ಲಾಸಿಕ್ ಯುಗದಿಂದ ಈಗಿನ ಮಾಡರ್ನ್ ಯುಗಕ್ಕೆ ಹೇಗೆ ಸ್ಥಿತ್ಯಂತರಗೊಂಡಿತೆಂದು ವಿವರಿಸುವಾಗ ಐವತ್ತು ಮತ್ತು ಅರವತ್ತರ ಮೇಲೆ ವಯಸ್ಸಾಗಿರುವ ಯಾವುದೇ ಭಾರತೀಯನಿಗೆ ಭಾರತೀಯ ಸಮಾಜ ಕಂಡ ವೈಜ್ಞಾನಿಕ, ತಾಂತ್ರಿಕ, ರಾಜಕೀಯ ಮತ್ತು ಜೀವನ ಶೈಲಿಯ ಸ್ಥಿತ್ಯಂತರಗಳು ಕಣ್ಣೆದುರು ಬರುತ್ತವೆ. ವಿವಿಧ ಕಾಲಘಟ್ಟಗಳಲ್ಲಿ ಉಂಟಾಗಿರುವ ಬದಲಾವಣೆಗಳು ಪ್ರಸ್ತುತ ಬದುಕಿಗೆ ನಿರ್ಣಾಯಕವಾಗಿರುವಂತೆ ತೋರಿದರೂ ಅದೂ ಕೂಡ ಮುಂದಿನ ದಿನಗಳಲ್ಲಿ ಗತಕಾಲದ ಒಂದು ಚಾರಿತ್ರಿಕ ಸಂಗತಿಯಾಗಿಬಿಡುತ್ತವೆ.

ಇಂತಹ ಸೂಕ್ಷ್ಮಾವಲೋಕನಗಳು ವ್ಯಕ್ತಿಯನ್ನೂ ಮತ್ತು ಅವನ ಸಮಾಜವನ್ನೂ ಸುವ್ಯವಸ್ಥೆಯಲ್ಲಿ ಇಟ್ಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಸಂವೇದನೆಗಳ ಕೊರತೆಯಿಂದಾಗಿಯೇ ನಮ್ಮ ಸಮಾಜದಲ್ಲಿ ಅಸೂಕ್ಷ್ಮದ ಹಲವಾರು ಸಂಗತಿಗಳು ಪದೇ ಪದೇ ಮರುಕಳಿಸುತ್ತಾ ಸಂಘದ ಬದುಕಿಗೆ ಘಾಸಿಯನ್ನು ಉಂಟು ಮಾಡುತ್ತಿರುವುದು.

=============

ಪ್ರಥಮ ರಕ್ತಸಾಕ್ಷಿ ಸ್ತೇಫನ - ಅಂತೋಣಿ ರಾಜ್, ಚಿಕ್ಕಕಮ್ಮನಹಳ್ಳಿ


ಮುನ್ನುಡಿ

ಪವಿತ್ರ ತಾಯಿ ಧರ್ಮಸಭೆ ಡಿಸೆಂಬರ್ 26 ರಂದು ತನ್ನ ಚೊಚ್ಚಲ ರಕ್ತಸಾಕ್ಷಿಯಾದ ಸ್ತೇಫನರನ್ನು ಸ್ಮರಿಸುತ್ತದೆ. ಗ್ರೀಕ್ ಭಾಷೆಯಲ್ಲಿ 'ಸ್ತೇಫನ ' ಎಂದರೆ 'ಕಿರೀಟ ಅಥವಾ ‘ಮುಕುಟ’ ಎಂಬ ಅರ್ಥವಿದೆ. ಡೆನ್ಮಾರ್ಕ್, ಜರ್ಮನಿ, ಫಿನ್ಲ್ಯಾಂಡ್ ಹಾಗೂ ಐಲೆರ್ಂಡ್ ಗಣರಾಜ್ಯದಂತಹ ವಿಶ್ವದ ಕೆಲವು ಭಾಗಗಳಲ್ಲಿ ಈ ದಿನವನ್ನು ಸಾರ್ವಜನಿಕ ರಜಾ ದಿನವೆಂದು ಪರಿಗಣಿಸಲಾಗುತ್ತದೆ. ಸ್ತೇಫನರನ್ನು ಧರ್ಮಾಧಿಕಾರಿಗಳ, ಪೀಠ ಸೇವಕರ ಪಾಲಕರು ಎಂದು ಕರೆಯುತ್ತಾರೆ. ಈ ವಿಶೇಷ     ದಿನದಂದು ಸ್ತೇಫನರು ನಡೆದು ಬಂದ ಕ್ರೈಸ್ತ ಸುವಾರ್ತಾ ವಿಶ್ವಾಸದ ಹಾದಿಯನ್ನು ಅವಲೋಕಿಸಿ ಅವರ ಅಚಲ ವಿಶ್ವಾಸದ ಪರಿಯನ್ನು ಮೆಲುಕುಹಾಕುವುದು ಸಮಂಜಸವೆನಿಸುತ್ತದೆ.

1. ಸಹಾಯಕ ಸೇವಾ ಜೀವನ

ಪವಿತ್ರ ಗ್ರಂಥದ ಪ್ರಕಾರ ಆದಿ ಧರ್ಮಸಭೆಯ ಆರಂಭದ ದಿನಗಳಲ್ಲಿ, ದಿನದಿಂದ ದಿನಕ್ಕೆ ಭಕ್ತ ವಿಶ್ವಾಸಿಗಳ ಸಂಖ್ಯೆ ಹೆಚ್ಚುತ್ತಾ ಬಂದಿತು. ಆಗ ಗ್ರೀಕ್ ಭಾಷೆ ಮಾತನಾಡುತಿದ್ದವರ ಹಾಗೂ ಸ್ಥಳೀಯ ಭಾಷೆ ಮಾತನಾಡುತಿದ್ದವರ ನಡುವೆ ಉಟೋಪಚಾರದ ವಿಷಯದಲ್ಲಿ ಬಿನ್ನಾಭಿಪ್ರಾಯ ಉಂಟಾಯಿತು. ಆಗ ಹನ್ನೆರಡು ಮಂದಿ ಪ್ರೇಷಿತರು ಭಕ್ತವಿಶ್ವಾಸಿಗಳ ಸಭೆ ಕರೆದು ಭಕ್ತ ವಿಶ್ವಾಸಿಗಳ ಉಟೋಪಚಾರ ಸೇವೆಗಾಗಿ ಏಳು ಮಂದಿ ಸಪ್ತ ಸಹಾಯಕರನ್ನು ನೇಮಿಸಿದರು. ಆ ಏಳು ಮಂದಿ ವಿಶೇಷ ವ್ಯಕ್ತಿಗಳಲ್ಲಿ ಈ ಸ್ತೇಫನರು ಅಗ್ರ ಗಣ್ಯರು. ಸ್ತೇಫನರು ಅಗಾಧ ವಿಶ್ವಾಸವುಳ್ಳವರೂ, ಪವಿತ್ರಾತ್ಮಭರಿತರೂ ಆಗಿದ್ದರು. "ದೈವಾನುಗ್ರಹದಿಂದಲೂ, ಶಕ್ತಿಯಿಂದಲೂ ತುಂಬಿದ್ದರು. ಜನರ ಮದ್ಯೆ ಅದ್ಭುತಗಳನ್ನೂ, ಸೂಚಕಕಾರ್ಯಗಳನ್ನೂ ಮಾಡತ್ತಿದ್ದರು". (ಪ್ರೇಷಿತರ ಕಾರ್ಯಕಲಾಪಗಳು 6:8)

2. ಶತ್ರುಗಳ ಉಗಮ - ದೈವ ದೂಷಣೆ ಅಪವಾದ

ಸ್ತೇಫನರ ಜನಪ್ರಿಯತೆ ಯೆಹೂದ್ಯರಲ್ಲಿ ದ್ವೇಷವನ್ನು ಹುಟ್ಟು ಹಾಕಿತು. ಬಿಡುಗಡೆ ಹೊಂದಿದವರು ಎಂಬ ಪ್ರಾರ್ಥನಾ ಮಂದಿರಕ್ಕೆ ಸೇರಿದ ಸೀರೇನ್ ಮತ್ತು ಅಲೆಕ್ಸ್ಜಂಡ್ರಿಯ ಹಾಗೂ ಸಿಸಿಲಿಯಾ ಮತ್ತು ಏಷ್ಯಾದ ಯೆಹೂದ್ಯರು ಸ್ತೇಫನರೊಂದಿಗೆ ವಾಗ್ವಾದಕ್ಕೆ ಇಳಿದರು. ಸ್ತೇಫನರ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ, ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲು ಅವರಿಂದ ಆಗಲಿಲ್ಲ. (ಪ್ರೇಷಿತರ ಕಾರ್ಯಕಲಾಪಗಳು 6:10) ಇದು ಸ್ತೇಫನರ ಶತ್ರುಗಳಲ್ಲಿ ಮತ್ತಷ್ಟು ಹಗೆತನವನು ಹುಟ್ಟುಹಾಕಿತು. ಅವರ      ವಿರೋಧಿüಗಳು ‘ಸ್ತೇಫನರು ಮೋಶೆ ಹಾಗೂ ದೇವರ ವಿರುದ್ದ ಧರ್ಮ ನಿಂದನೆ ಮಾಡುತ್ತಾರೆ’ ಎಂಬ ಆರೋಪ ಹೊರಿಸಿ ನ್ಯಾಯ ವಿಚಾರಣೆ ಸಭೆಯ ಮುಂದೆ ನಿಲ್ಲಿಸಿದರು.

3. ನ್ಯಾಯ ವಿಚಾರಣೆ - ಸ್ತೇಫನರ ಸುದೀರ್ಘ ವ್ಯಾಖ್ಯಾನ

ಸ್ತೇಫನರನ್ನು ಪ್ರಧಾನ ಯಾಜಕರು ‘ನಿನ್ನ ಮೇಲೆ ಹೊರಿಸಿರುವ ಆಪಾದನೆ ಸತ್ಯವೋ’ ಎಂದು ಕೇಳಿದಾಗ, ಅವರು ಪಿತಾಮಹ ಅಬ್ರಹಾಂನಿಂದ ಹಿಡಿದು ಸೋಲೋಮೋನ್ ಅರಸನವರೆಗೆ ಇಸ್ರಾಯೇಲ್ ಇತಿಹಾಸ ಹಾಗೂ ದೇವರು ತಾನು ಆರಿಸಿಕೊಂಡ ಜನಾಂಗದ ಮೇಲೆ ನೀಡಿದ ಆಶೀರ್ವಾದಗಳ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತಾರೆ. ಪ್ರೇಷಿತರ ಕಾರ್ಯಕಲಾಪಗಳು 7 - 1:50 ರಲ್ಲಿ ಅವರ ಸುದೀರ್ಘ ಭಾಷಣದ ವ್ಯಾಖ್ಯಾನ ಇದೆ.

4. ಪ್ರಭು ಯೇಸುವಿನ ಹಾಗೆ ನಿಷ್ಠುರವಾಗಿ ಟೀಕಿಸಿದ ಸ್ತೇಫನರು

ಪ್ರಭು ಯೇಸು ತಮ್ಮ ಸುವಾರ್ತಾ ಜೀವನದಲ್ಲಿ ಹೇಗೆ ಫರಿಸಾಯರನ್ನು ಹಾಗೂ ಧರ್ಮಶಾಸ್ತ್ರಿಗಳನ್ನು ನೇರವಾಗಿ ಟೀಕಿಸಿದರೋ ಹಾಗೆಯೇ ಸ್ತೇಫನರು ಯೆಹೂದ್ಯರನ್ನು ‘ನೀವು ಕಠಿಣ ಹೃದಯಿಗಳು ದೇವರ ಸಂದೇಶಕ್ಕೆ ಕಿವುಡರು, ನಿಮ್ಮ ಪೂರ್ವಜರಂತೆ ನೀವೂ ಸಹ ಪವಿತ್ರಾತ್ಮರನ್ನು ಪ್ರತಿಭಟಿಸುತ್ತೀರಿ. ನಿಮ್ಮ ಪೂರ್ವಜರು ಪ್ರವಾದಿಗಳನ್ನು ಕೊಲೆಮಾಡಿದರು. ನೀವಾದರೋ ಸತ್ಯಸ್ವರೂಪನಾದ ದೇವಕುಮಾರನನ್ನು ಹಿಡಿದು ಕೊಟ್ಟು ಕೊಲೆ ಮಾಡಿಸಿದಿರಿ’.(ಪ್ರೇಷಿತರ ಕಾರ್ಯಕಲಾಪಗಳು 7,51:53)ಹೀಗೆ ಸ್ತೇಫನರು ಅವರನ್ನು ನೀವು ಕಾನೂನನ್ನು ಪಡೆದು ಅದನ್ನು ಪಾಲಿಸಲಿಲ್ಲ, ಹೀಗೆ ಅವಿಧೇಯರಾಗಿ ನಡೆದಿರಿ ಎಂದು ಕಟುವಾಗಿ ಟೇಕಿಸುತ್ತಾರೆ. ದೇವರ ಕರುಣೆ ಮತ್ತು ಅನುಗ್ರಹದ ಹೊರತಾಗಿಯೂ ಇಸ್ರಾಯಲ್ ಹೀಗೆ ವಿಧೇಯರಾದರು ಎಂಬುದರ ಬಗ್ಗೆ ತೀವ್ರವಾಗಿ ಖಂಡಿಸಿದರು.

5. ಸಾವಿನಲ್ಲೂ ಪ್ರಭುವನ್ನು ಅನುಕರಿಸಿ - ಸಂಯಮ ತೋರಿ ಹುತಾತ್ಮರಾದ ಸ್ತೇಫನರು

ಸ್ತೇಫನರ ನೇರ ಮತ್ತು ನಿಷ್ಠುರ ನುಡಿಗಳಿಂದ ಕೋಪೋದ್ರಿತರಾದ ನ್ಯಾಯಸಭೆಯ ಸದಸ್ಯರು ಅವರ ಮೇಲೆ ಕಟ ಕಟನೆ ಹಲ್ಲು ಕಡಿದರು. ಸ್ತೇಫನರು ಪವಿತ್ರಾತ್ಮಭರಿತರಾಗಿ ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರ ಮಹಿಮೆಯನ್ನೂ ಅವರ ಬಲಪಾರ್ಶದಲ್ಲಿ ನಿಂತಿದ್ದ ಯೇಸುವನ್ನು ಕಂಡು ನ್ಯಾಯಸಭೆಯವರಿಗೆ ತಿಳಿಸಿದಾಗ ಅವರು ಸ್ತೇಫನರನ್ನು ಪಟ್ಟಣದಿಂದ ಹೊರಕ್ಕೆ ದೂಡಿ ಅವರ ಮೇಲೆ ಕಲ್ಲು ತೂರಿದರು.

 6. ಕೊನೆಯುಸಿರಲ್ಲೂ ಪ್ರಾರ್ಥನೆ, ಕ್ಷಮೆ ಮತ್ತು ಕರುಣೆಯ ಉಸಿರಾಡಿದ ಸ್ತೇಫನರು ಕ್ರಿಸ್ತನ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ನಡೆದರು..

ಸ್ತೇಫನರು ತನ್ನ ಮೇಲೆ ಕಲ್ಲು ಎಸೆಯುತಿದ್ದಾಗ ಪ್ರಭು ಯೇಸು ಹೇಗೆ ತಮ್ಮ ತಂದೆಯಲ್ಲಿ ಪ್ರಾರ್ಥಿಸಿದರೋ ಹಾಗೆಯೇ ಇವರು ಪ್ರಭು ಯೇಸುವಿನಲ್ಲಿ ತಮ್ಮ ಆತ್ಮವನ್ನು ಸ್ವೀಕರಿಸಿ ಎಂದು ಪ್ರಾರ್ಥಿಸಿದರು. ಕೊನೆಗೆ ಮೊಣಕಾಲೂರಿ ಅವರನ್ನು ಕೊಲ್ಲುವವರಿಗಾಗಿ ಪ್ರಾರ್ಥಿಸಿದರು. ಈ ಪಾಪವನ್ನು ಅವರ ಮೇಲೆ ಹೊರಿಸಬೇಡಿ ಎಂದು ತಮ್ಮ ಪ್ರಾಣತ್ಯಾಗ ಮಾಡಿದರು..

 ಭಕ್ತ ವಿಶ್ವಾಸಿಗಳು ಸ್ತೇಫನರನ್ನು ಸಮಾಧಿ ಮಾಡುತ್ತಾರೆ. ಆದರೆ ಆ ಸಮಾಧಿಯ ಸ್ಥಳವನ್ನು ನಿರ್ದಿಷ್ಟಪಡಿಸಲಾಗಲಿಲ್ಲ. ಕ್ರಿ.ಶ 415 ರಲ್ಲಿ ಲೂಸಿಯನ್ ಎಂಬ ಗುರುಗಳು ತಮ್ಮ ಕನಸಿನಲ್ಲಿ ಕಂಡ ದರ್ಶನದ ಮೂಲಕ ಸ್ಟೇಫನರ ಸಮಾಧಿ ಸ್ಥಳವನ್ನು ದೃಢಪಡಿಸುತ್ತಾರೆ. ನಂತರ ಅವರ ಅವಶೇಷಗಳನ್ನು ಡಿಸೆಂಬರ್ 26, ಕ್ರಿ.ಶ. 415 ರಂದು ಹಗಿಯಾ ಸಿಯಾನ್ ಚರ್ಚ್‍ಗೆ ತರಲಾಯಿತು ಎಂಬುದಾಗಿ ಇತಿಹಾಸವು ಹೇಳುತ್ತದೆ.

============

ಕ್ರೈಸ್ತರ ಕೆಂಪು ಬುಧವಾರ - ಫ್ರಾನ್ಸಿಸ್. ಎಂ. ಎನ್.

 


ಕೆಂಪು ಬಣ್ಣ, ಕೆಂಪು ಹೃದಯ ಪ್ರೀತಿಯ ಸಂಕೇತ. ಜೊತೆಗೆ ಹಿಂಸೆ, ಅಪಾಯ, ಸಿಟ್ಟು ಸೆಡುವುಗಳಿಗೂ ಕೂಡ ಅದೇ ಬಣ್ಣ ಬೇಕು. ನಮ್ಮ ಪುರಾತನರು ಬೆಂಕಿ ಮತ್ತು ರಕ್ತಗಳನ್ನು ಶಕ್ತಿ ಮತ್ತು ಜೀವಜಲ ಎಂದು ಕೊಂಡಿದ್ದರು. ಧಾರ್ಮಿಕ ಮತ್ತು ಮಾಂತ್ರಿಕ ಶಕ್ತಿಗಳ ಗುರುತಾಗಿಯೂ ಈ ಬಣ್ಣವನ್ನು ಬಳಸಲಾಗುತ್ತದೆ. ವಿರೋಧಾಭಾಸ ಎಂದರೆ, ಬಟ್ಟೆಗೆ ಹಾಕುವ ಕಡು ಕೆಂಪು ಬಣ್ಣವನ್ನು ಕೆಲವು ಬಗೆಯ ಜೀರುಂಡೆ ಜಾತಿಯ ಕೀಟಗಳನ್ನು ಕುಟ್ಟಿ ಪಡೆಯಲಾಗುತ್ತಿದೆ.

ನಿಸರ್ಗ ವ್ಯಾಪಾರಗಳಾದ ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಕೆಂಪು ರಂಗು ಹಲವಾರು ಬಗೆಯ ವರ್ಣನೆಗಳಗೆ, ವ್ಯಾಖ್ಯಾನಗಳಿಗೆ ಕಾರಣವಾಗಿದೆ.

  ಆಯಾದೇಶದಲ್ಲಿ, ನಾಲ್ಕಾರು ದೇಶಗಳಿಗೆ ಕಥೋಲಿಕ ಕ್ರೈಸ್ತರ ಜಗದ್ಗುರು ಪಾಪುಸ್ವಾಮಿಗಳ ಪ್ರತಿನಿಧಿಗಳಾಗಿರುವ ಪ್ರಧಾನ(ಕಾರ್ಡಿನಲ್)ರು ತೊಡುವ ಮೇಲಂಗಿ ಮತ್ತು ತಲೆ ಬುರುಡೆ ಮುಚ್ಚುವ ಕಿರಿದಾದ ಟೋಪಿಯ ಬಣ್ಣ ಕೆಂಪು.   ಯೇಸುಸ್ವಾಮಿಯನ್ನು ಶಿಲುಬೆಗೆ ಏರಿಸಿದಾಗ ಕೈ ಮತ್ತು ಪಾದಗಳಿಂದ ರಕ್ತ ಸುರಿದಿತ್ತು. ಕ್ರೈಸ್ತ ವಿಶ್ವಾಸಕ್ಕಾಗಿ ಪ್ರಾಣತ್ಯಾಗ ಮಾಡಲೂ ಸಿದ್ಧ ಎಂಬುದನ್ನು ಇದು ಸೂಚಿಸುತ್ತದೆ. 2020ರ ಸಾಲಿನ ನವೆಂಬರ 29ರಂದು ನಡೆದ 13 ಜನ ನೂತನ ಪ್ರಧಾನರ ಅಭಿಷೇಕದ ಸಂದರ್ಭದಲ್ಲಿ ಪಾಪು ಸ್ವಾಮಿಗಳು, `ಹೃದಯದಾಳದಿಂದ    ಯೇಸುಸ್ವಾಮಿಯನ್ನು ಹಿಂಬಾಲಿಸುವುದನ್ನು ನೀವು ಧರಿಸುವ ಕೆಂಪು ಬಣ್ಣದ ಧಿರಿಸು ಸಂಕೇತಿಸುತ್ತದೆ’ ಎಂದು ಹೇಳಿದ್ದರು.

  ಸಾಮಾಜಿಕ ವಲಯದಲ್ಲಿ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. ಸಮಾಜದಲ್ಲಿ ಈ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸಲು ಕೆಲವು ಸಂಘಟನೆಗಳು, 2020ರ ಸಾಲಿನಲ್ಲಿ ಮುಂಗೈಗೆ ಕೆಂಪು ಬಣ್ಣ ಬಳಿದುಕೊಳ್ಳುವ `ಕೆಂಪು ಕೈ‘ (ರೆಡ್ ಹ್ಯಾಂಡ್) ಅಭಿಯಾನ ನಡೆಸಿದವು. ಈ ಅಭಿಯಾನಕ್ಕೆ, ವಾಟ್ಸ್ ಆಪ್, ಫೇಸ್ ಬುಕ್, ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣಗಳನ್ನು ಬಳಸಲಾಯಿತು. ಕೆಂಪು ಬಣ್ಣದ ರಿಬ್ಬನ್ ಸಹ ಏಡ್ಸ್ ರೋಗದ ಸಂಕೇತವಾಗಿ ಬಳಸಲಾಗುತ್ತಿದೆ.

ಭಾರತೀಯರಾದ ನಾವು ಕೆಂಪು ಬಣ್ಣದ ಕುಂಕುಮವನ್ನು ಮಂಗಳಕಾರಿ ಎಂದು ಪರಿಗಣಿಸುತ್ತೇವೆ. ಮಹಿಳೆಯರ ಹಣೆಯ ಸಿಂಧೂರವೂ ಕೆಂಪು ಬಣ್ಣದಲ್ಲೇ ಇರುತ್ತದೆ. ಮದುವೆಗೆ, ಸಂತೋಷ ಮತ್ತು ಶುಭಶಕುನದ ಕೆಂಪು ಬಣ್ಣದ ಸೀರೆಯೇ ಬೇಕು, ಯಾವುದೇ ವಾಹನ ಅಥವಾ ಕೆಲಸವನ್ನು `ನಿಲ್ಲಿಸು’ ಎನ್ನುವುದಕ್ಕೆ ಕೆಂಪು ಬಣ್ಣದ ಗುರುತನ್ನೇ ಬಳಸುತ್ತೇವೆ.

ಕ್ರೈಸ್ತರ ಮೇಲಿನ ದೌರ್ಜನ್ಯ ತಡೆಗೆ ಕೆಂಪು:

ಈಗ ಕ್ರೈಸ್ತರು ಸಹೋದರ ಸಹೋದರಿಯರು, ಜಗತ್ತಿನ ವಿವಿಧೆಡೆ ತಮ್ಮ ಸಹೋದರ ಸಹೋದರಿಯರ ಮೇಲೆ, ಧಾರ್ಮಿಕ ಕಾರಣವಾಗಿ ನಡೆಯುತ್ತಿರುವ ಕಿರುಕುಳ, ಅನ್ಯಾಯ, ಅನಾಚಾರಗಳ ಬಗ್ಗೆ ಗಮನ ಸೆಳೆಯಲು, ಅಂಥ ಸಂತ್ರಸ್ತರಿಗೆ ನೈತಿಕ ಬೆಂಬಲದ ಜೊತೆಗೆ ಎಲ್ಲಾ ಬಗೆಯ ಸಹಾಯ ನೀಡುವ ಉದ್ದೇಶಕ್ಕಾಗಿ ಒಂದು ದಿನವನ್ನು ಮೀಸಲಿಡಲಾಗಿದೆ.

ಪತ್ರಿವರ್ಷ ನವೆಂಬರ ತಿಂಗಳ ಮೂರನೇ ವಾರದ ಬುಧವಾರದಂದು ಕಥೋಲಿಕ ಕ್ರೈಸ್ತರು `ಕೆಂಪು ಬುಧವಾರ’ವನ್ನು ಆಚರಿಸುತ್ತಿದ್ದಾರೆ. ಇಂಗ್ಲಂಡಿನಲ್ಲಿ ಮೊದಲ ಬಾರಿ 2016ರಲ್ಲಿ `ಕೆಂಪು ಬುಧವಾರ’ವನ್ನು ಆಚರಿಸಲಾಯಿತು.  ಈಗ ಜಗತ್ತಿನ ಬಹುತೇಕ ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಅಂದು ಸಾಮಾನ್ಯವಾಗಿ ಚರ್ಚುಗಳನ್ನು ಮತ್ತು ಸಾರ್ವಜನಿಕ ಕಟ್ಟಡಗಳನ್ನು ಕೆಂಪು ಬಣ್ಣದ ದೀಪಗಳಿಂದ ಅಲಂಕರಿಸಲಾಗುತ್ತದೆ. ಕೆಂಪು ಬುಧವಾರ ಆಚರಣೆಯನ್ನು ಬೆಂಬಲಿಸುವವರು ಜನರು ಕೆಂಪು ಬಟ್ಟೆ ಧರಿಸುತ್ತಾರೆ.

ಹೆಚ್ಚುತ್ತಿರುವ ಕ್ರೈಸ್ತರ ಮೇಲಿನ ಕಿರುಕುಳ:

ಹಿಂದೆ, ಆದಿ ಕಾಲದಲ್ಲಿ ರೋಮನ್ ಚಕ್ರವರ್ತಿಗಳು ನೀಡುತ್ತಿದ್ದ ಕಿರುಕುಳ ಹೊರತುಪಡಿಸಿದರೆ, ಕ್ರೈಸ್ತರು ಇಂದು ಜಗತ್ತಿನಾದ್ಯಂತ ಕಿರುಕುಳಕ್ಕೆ ಒಳಗಾಗುತ್ತಿರುವ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ.

ಕ್ರೈಸ್ತ ವಿಶ್ವಾಸಿಗಳ ಮೇಲಾಗುತ್ತಿರುವ ಕಿರುಕುಳದ ಪ್ರಮಾಣ, ಕಿರುಳುಳಕ್ಕೆ ಈಡಾಗುವವರ ಸಂಖ್ಯೆ ಮತ್ತು ಅದರ ಪರಿಣಾಮ ಈಗಿನ ದಿನಮಾನಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ.

ಕಿರುಕುಳದ ದೆಸೆಯಿಂದ ಯಾರ ಬಾಯಿ ಕಟ್ಟಿದಂತಾಗಿದೆಯೋ, ಅವರ ಪರವಾಗಿ ದನಿ ಎತ್ತಬೇಕಾಗಿದೆ. ಅವರ ಕಿರುಕುಳದ ವಿರುದ್ಧ ಗಟ್ಟಿ ದನಿಯಲ್ಲಿ ಅವರಿಗೆ ಬೆಂಬಲ ಸೂಚಿಸಬೇಕಾಗಿದೆ. ಇದನ್ನು ಮನಗಂಡ ಎ.ಸಿ.ಎನ್ ಸಂಘಟನೆ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಯಿತು.

  ಏನಿದು ಎ ಸಿ ಎನ್?:

ಎ ಸಿ ಎನ್ ಎಂದರೆ, ಏಡ್ ಟು ದಿ ಚರ್ಚ ಇನ ನೀಡ್’. ಕನ್ನಡದಲ್ಲಿ ಇದನ್ನು `ಅಗತ್ಯವಿರುವ ಧರ್ಮಸಭೆಗೆ ಸಹಾಯ’ (ನೀಡುವುದು) ಎಂದು ತರ್ಜುಮೆ ಮಾಡಬಹುದು. ಇದೊಂದು ಧಾರ್ಮಿಕ ಸಂಘಟನೆ. ಇದರ ಮೂಲ ಬೇರುಗಳನ್ನು ಹುಡುಕುತ್ತ ಸಾಗಿದರೆ, ನಾವು ಯುರೋಪಿನಲ್ಲಿ ನಡೆದಿದ್ದ ಎರಡನೇ ಮಹಾಯುದ್ಧದ ದಿನಗಳಿಗೆ ಹೋಗಬೇಕಾಗುತ್ತದೆ.

ಯುರೋಪು ಖಂಡದಲ್ಲಿ ಸಾಕಷ್ಟು ಆಸ್ತಿಪಾಸ್ತಿ ನಾಶವಾಗಿತ್ತು, ನೂರಾರು ಜನರು ಯುದ್ಧಭೂಮಿಯಲ್ಲಿ ಅಸುನೀಗಿದ್ದರೆ, ಸಹಸ್ರಾರು ಜನ ಅನಾಥರಾಗಿದ್ದರು, ನಿರ್ವಸಿತಗೊಂಡಿದ್ದರು. ಕಿರುಕುಳದಿಂದ ಬೇಸತ್ತ ಜನ ಪೂರ್ವ ಜರ್ಮನಿಯಿಂದ ಸುರಕ್ಷಿತ ನೆಲೆ ಮತ್ತು ಆಹಾರ ಅರಸಿಕೊಂಡು ಗುಳೆ ಬರುತ್ತಿದ್ದರು.

ಅಂಥ ದುರ್ಭರ ಸಂದರ್ಭದಲ್ಲಿ ವಂದನೀಯ ಫಾದರ್ ವೆರೆನ್‍ಫ್ರೈಡ್ ವ್ಯಾನ್ ಸ್ಟ್ರಟನ್ ಎಂಬುವವರು, ಯುದ್ಧದ ಸಂತ್ರಸ್ತರಿಗಾಗಿ `ಕಲ್ಯಾಣ ಸಂಸ್ಥೆ’ಯೊಂದನ್ನು ಹುಟ್ಟುಹಾಕಿದ್ದರು. ಈ ಸಂಸ್ಥೆಯು ಪೂರ್ವ ಜರ್ಮನಿಯ ಸಂತ್ರಸ್ತರಿಗೆ ಆಹಾರ ಮತ್ತು ಬಟ್ಟೆಗಳನ್ನು ಒದಗಿಸಿ ಅವರ ಆಧ್ಯಾತಿಕ ಅಗತ್ಯಗಳನ್ನು ಪೂರೈಸುತ್ತಿತ್ತು.

ಒಣ ಹಂದಿ ಮಾಂಸದ ಪಾದ್ರಿ:

ಯುದ್ಧದಿಂದ ಬಸವಳಿದಿದ್ದ ದಾನಿಗಳು ಏನು ಕೊಟ್ಟರೂ ಅದನ್ನು ಸ್ವೀಕರಿಸಿ, ಬೇಕಿದ್ದವರಿಗೆ ಮುಟ್ಟಿಸುತ್ತಿದ್ದರು. ಹಣವಿಲ್ಲದವರು ಆಹಾರ ಸಾಮಗ್ರಿಗಳನ್ನು ಕೊಡುತ್ತಿದ್ದರು. ಬಹುತೇಕರು ಉಪ್ಪನ್ನು ಉದುರಿಸಿ ಒಣಗಿಸಿದ ಹಂದಿ ಮಾಂಸವನ್ನು ಕೊಡುತ್ತಿದ್ದರು. ಅದನ್ನು `ಬೇಕನ್’ ಎನ್ನುತ್ತಾರೆ. ಫಾದರ್ ಸ್ಟ್ರಟನ್ ಅವರನ್ನು ಜನ ಪ್ರೀತಿಯಿಂದ `ಬೇಕನ್ ಪ್ರೀಸ್ಟ್’ ಎಂದು ಕರೆಯುತ್ತಿದ್ದರಂತೆ.

ಮುಂದೆ 1950ರಲ್ಲಿ ಶೀತಲ ಸಮರ ಆರಂಭವಾದಾಗ, ವಿವಿಧ ದೇಶಗಳಲ್ಲಿ ಧರ್ಮದ ಹಿನ್ನೆಲೆಯಿಂದ         ಬಂಧಿತರಾಗುತ್ತಿದ್ದವರ ಬೆಂಬಲಕ್ಕೆ ಈ ಸಂಘಟನೆ ಮುಂದೆ ಬಂದಿತು. ಅದರ ಸೇವಾ ಕ್ಷೇತ್ರದ ವ್ಯಾಪ್ತಿ ಆಫ್ರಿಕಾ, ಏಷ್ಯ ಮತ್ತು ಲ್ಯಾಟಿನ ಅಮೇರಿಕ ಪ್ರದೇಶದ ದೇಶಗಳಿಗೂ ಹಬ್ಬಿದೆ. ಇಂದು ಸಂಘಟನೆಗೆ ವಿವಿಧೆಡೆಯಿಂದ ವರ್ಷಕ್ಕೆ 106 ದಶಕೋಟಿ ಯುರೋ ಡಾಲರ್ ಹಣ ಹರಿದು ಬರುತ್ತಿದೆ. ಈಗ ಈ ಸಂಘಟನೆ ವಿಶ್ವದೆಲ್ಲೆಡೆ ಕಿರುಕುಳದ ಸಂತ್ರಸ್ತರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಕಳೆದ ಶತಮಾನದ 1947ರಲ್ಲಿ ಆರಂಭವಾದ ಈ ಸಂಘಟನೆಗೆ, ಈ ಶತಮಾನದ 2011ರಲ್ಲಿ ಕಥೋಲಿಕ ಧರ್ಮಸಭೆ ತನ್ನ ಅಧಿಕೃತ ಮುದ್ರೆಯನ್ನು ಒತ್ತಿದೆ. ಇಡೀ ಜಗತ್ತಿನಲ್ಲಿ ಕ್ರೈಸ್ತ ಧರ್ಮದ ದೆಸೆಯಿಂದ, ಕಿರುಕುಳ ಅನುಭವಿಸುತ್ತಿರುವರ, ಸಂತ್ರಸ್ತರಾದವರ ನೆರವಿಗೆ ಈ ಸಂಘಟನೆ ಧಾವಿಸುತ್ತದೆ. ಅವರೊಂದಿಗೆ ಮಾಹಿತಿ ವಿನಿಮಯ ಮಾಡುತ್ತಾ, ಅವರಿಗಾಗಿ ಪ್ರಾರ್ಥಿಸುತ್ತಾ, ಅಗತ್ಯ ನೆರವನ್ನು ನೀಡಲು ಶ್ರಮಿಸುತ್ತಿದೆ.

 `ಕೆಂಪು ಬುಧವಾರ’ಕ್ಕೆ ಸಿಎಸ್ ಡ್ಲೂ ಬೆಂಬಲ:

`ಕೆಂಪು ಬುಧವಾರ’ದ ಆಚರಣೆಯಲ್ಲಿ ಇತ್ತೀಚೆಗೆ, ಕ್ರೈಸ್ತ ವಿಶ್ವವ್ಯಾಪಿ ಐಕಮತ್ಯ  (ಕ್ರಿಶ್ಚಿಯನ್ ಸಾಲಿಡ್ಯಾರಿಟಿ ವಲ್ರ್ಡವೈಡ್ -ಸಿಎಸ್ ಡ್ಲೂ) ಸಂಘಟನೆಯು `ಕೆಂಪು ಬುಧವಾರ’ದ ಆಚರಣೆಗೆ ಬೆಂಬಲ ನೀಡತೊಡಗಿದೆ.

ಮೆರ್ವಿನ್ ಥಾಮಸ್ ಅವರು ಈ ಸಂಘಟನೆಯ ಸ್ಥಾಪಕ ಅಧ್ಯಕ್ಷರು. ಈ ಸಂಘಟನೆಯು ಧಾರ್ಮಿಕ ಸ್ವಾತಂತ್ರ್ಯ ಹಾಗೂ ಮಾನವಹಕ್ಕು ರಕ್ಷಣೆಗೆ ಶ್ರಮಿಸುತ್ತಿದೆ. ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸುತ್ತದೆ.

`ಪ್ರತಿಯೊಬ್ಬರೂ ತಮ್ಮ ವಿಶ್ವಾಸಹೊಂದಲು ಸ್ವತಂತ್ರರು. ತಾವು ನಂಬಿದ ವಿಶ್ವಾಸ, ಧರ್ಮದ ಕಾರಣ ಅನ್ಯಾಯಕ್ಕೀಡಾಗುವವರ ಪರ ನಾವು ಕ್ರೈಸ್ತರು ನಿಲ್ಲುತ್ತೇವೆ’ ಎಂಬುದು ಇದರ ಧ್ಯೇಯವಾಕ್ಯ.

`ಕೆಂಪು ಬುಧವಾರ’ದ ಆಚರಣೆ ಹೇಗೆ?:

ಕೆಲವು ಸಲಹೆಗಳು ಇಂತಿವೆ. ತಲೆಯಿಂದ ಕಾಲಿನವರೆಗೂ ಕೆಂಪು ಬಣ್ಣದ ಬಟ್ಟೆ ತೊಡಲು ಸಾಧ್ಯವಾಗದಿದ್ದರೆ, ಹೆಣ್ಣುಮಕ್ಕಳು ತುರುಬಿಗೆ ಕೆಂಪು ಬಣ್ಣದ ರಿಬ್ಬನ್ ಅಥವಾ ಕ್ಲಿಪ್ ಗಳನ್ನು ಹಾಕಿಕೊಳ್ಳಬಹುದು. ಗಂಡಸರು ಮತ್ತು ಹೆಣ್ಣುಮಕ್ಕಳು ತೋಳುಗಳಿಗೆ ಕೆಂಪು ಬಣ್ಣದ ಪಟ್ಟಿ ಕಟ್ಟಿಕೊಳ್ಳಬಹುದು. ಕತ್ತಿಗೆ ಕೆಂಪು ಸ್ಕಾರ್ಫ ಹಾಕಿಕೊಳ್ಳಬಹುದು. ತಲೆಗೆ ಕೆಂಪು ಟೋಪಿ ಹಕಿಕೊಳ್ಳಬಹುದು. ತಮ್ಮ ಕೆಂಪುಡುಗೆಯ ಸೆಲ್ಫಿ ತೆಗೆದು ಸಾಮಾಜಿಕ ತಾಣಗಳಲ್ಲಿ ತೂರಬಹುದು. ಜೊತೆಗೆ ಕೆಂಪು ಬುಧವಾರ ಎಂಬ ಹ್ಯಾಷ್ ಟ್ಯಾಗ್ - ಬಾಲಂಗೊಚಿ ಇರಲೇಬೇಕು.

 ಕ್ರೈಸ್ತ ಪ್ರೀತಿಗಾಗಿ ತೊಂದರೆ ಅನುಭವಿಸುತ್ತಿರುವವರಲ್ಲಿ ನಮ್ಮ ಪ್ರೀತಿ ಸಹೋದರತೆ ಮತ್ತು ಒಗ್ಗಟ್ಟನ್ನು ಸೂಚಿಸಲು, ಕ್ರೈಸ್ತರಿಗೆ ಪ್ರಾರ್ಥನೆ ಎಂಬುದು ಒಂದು ದೊಡ್ಡ ಸಾಧನ ಎಂಬುದನ್ನು ಮರೆಯಲಾಗದು. ಕಿರುಕುಳ ಅನುಭವಿಸುವವರ ಕಲ್ಯಾಣಕ್ಕಾಗಿ ಪೂಜೆಗಳನ್ನು ಹೇಳಬೇಕು, ಜಪಮಾಲೆ ಹೇಳಬಹುದು, ರಾತ್ರಿ ಪೂಜಾ ಜಾಗರಣೆ ಮಾಡಬಹುದು.

 ಕ್ರೈಸ್ತರು ತಮ್ಮ ಮೇಲಿನ ದೌರ್ಜನ್ಯಗಳನ್ನು ನಿರ್ಲಕ್ಷಿಸುವುದು ಸಹಜ ಸಂಗತಿಯಾಗಿದೆ. ಆದರೆ, ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಗಮನಕ್ಕೆ ಬಂದ ದೌರ್ಜನ್ಯದ ಕತೆಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಅಂಥವನ್ನು ಜಾಲತಾಣಗಳಲ್ಲಿ ಹಂಚಿಕೊಂಡು, ಅದಕ್ಕೆ ಕೆಂಪು ಬುಧವಾರ ಬಾಲಂಗೋಚಿ ಹಚ್ಚಬೇಕು.

 ಕೊನೆಯದು ಆದರೂ ಮುಖ್ಯವಾದದು. ಏಡ್ ಟು ದಿ ಚರ್ಚ ಇನ್ ನೀಡ್ ಸಂಘಟನೆಗೆ ದೇಣಿಗೆ ಹೊಂದಿಸುವುದು. ಮನಸ್ಸು ಮಾಡಿದರೇ ಅದಕ್ಕೆ ನೂರೆಂಟು ದಾರಿಗಳು ತೆರೆದುಕೊಳ್ಳುತ್ತದೆ ಎಂಬುದನ್ನು ಮರೆಯುವಂತಿಲ್ಲ.

`ಕೆಂಪು ಬುಧವಾರ’ಕ್ಕೆ ಸ್ಪಂದನೆ ಅತ್ಯಲ್ಪ:

ಪ್ರಸಕ್ತ ಸಾಲಿನ ನವೆಂಬರ 28, `ಕೆಂಪು ಬುಧವಾರ’ವಾಗಿತ್ತು. ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ. ಕ್ರೈಸ್ತ ಧರ್ಮದ ದೆಸೆಯಿಂದ ಕಿರುಕುಳವನ್ನು ಅನುಭವಿಸುತ್ತಿರುವ ಕ್ರೈಸ್ತ ಸಹೋದರ ಸಹೋದರಿಯರೊಂದಿಗೆ ನಾವು ಇದ್ದೇವೆ ಎಂಬುದನ್ನು ದೃಢಪಡಿಸಲು `ಕೆಂಪು ಬುಧವಾರ’ ವನ್ನು ಆಚರಿಸಲಾಯಿತು.

ಧಾರ್ಮಿಕ ಕಿರುಕುಳದೊಂದಿಗೆ ಈ ಬಾರಿ, ಕರೋನ ಕಾಯಿಲೆಗೆ ಬಲಿಯಾದವರಿಗಾಗಿ, ಕಾಯಲೆಯ ಚಿಕಿತ್ಸೆಯಲ್ಲಿ ತೊಡಗಿರುವವರಿಗಾಗಿ, ಚಂಡ ಮಾರುತದಂಥ ನೈಸರ್ಗಿಕ ವಿಪುತ್ತುಗಳಲ್ಲಿ ನೊಂದವರಿಗಾಗಿಯೂ `ಕೆಂಪು ಬುಧವಾರ’ವನ್ನು ಮೀಸಲಿಡಲಾಯಿತು. ಆದರೆ, ನಮ್ಮ ನಾಡಿನಲ್ಲಿ ಅದರ ಸೊಲ್ಲು ಎಲ್ಲೂ ಕೇಳಿಸಲಿಲ್ಲ. ದೂರದ ಜಾರ್ಖಂಡ್, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿನ ಕ್ರೈಸ್ತ ವಿಶ್ವಾಸಿಗಳ ಮೇಲಿನ ದೌರ್ಜನ್ಯಗಳು, ಆಗಾಗ ವರದಿ ಆಗುತ್ತಲೇ ಇರುತ್ತವೆ. ಅವರ ಸಂಕಷ್ಟಗಳಿಗೆ ನಮ್ಮ ಸ್ಪಂದನೆ ಅತ್ಯಲ್ಪ.


ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...