ಸಹೋ. ವಿನಯ್ ಕುಮಾರ್
-------------
ಈ ಸಂಚಿಕೆಯಲ್ಲಿ ಇತರೆ ಶುಭಸಂದೇಶಗಳಿಗೂ ಹಾಗೂ ಸಂತ ಯೊವಾನ್ನರ ಶುಭಸಂದೇಶಕ್ಕೂ ಇರುವ ಸಾಮ್ಯತೆಗಳು ಹಾಗೂ ಭಿನ್ನತೆಗಳನ್ನು ನೋಡೋಣ.
-----------
ಭಿನ್ನತೆಗಳು
ಇತರೆ ಶುಭ ಸಂದೇಶಗಳಲ್ಲಿ ಸಿಗುವಂತಹ ಸಾಹಿತ್ಯದ ಪ್ರಕಾರಗಳು ಸಂತ ಯೊವಾನ್ನರ ಶುಭಸಂದೇಶದಲ್ಲಿ ಇಲ್ಲದೆ ಇರುವಂತದ್ದು.
1) ಮತ್ತಾಯ ಮತ್ತು ಲೂಕನ ಶುಭ ಸಂದೇಶವು ಯೇಸುಸ್ವಾಮಿಯ ಜನನದ ಪ್ರಕರಣದೊಂದಿಗೆ ಹಾಗೂ ಯೇಸುಸ್ವಾಮಿಯ ವಂಶಾವಳಿಯೊಂದಿಗೆ ಪ್ರಾರಂಭವಾಗುತ್ತದೆ, ಆದರೆ ಈ ಶುಭಸಂದೇಶದಲ್ಲಿ ನಾವು ಈ ಎರಡನ್ನೂ ಕಾಣುವುದಿಲ್ಲ.
2) ಇತರೆ ಶುಭ ಸಂದೇಶಗಳಲ್ಲಿ ಸ್ನಾನಿಕ ಯೊವಾನ್ನರ ಐತಿಹಾಸಿಕ ಕುರುಹುಗಳನ್ನು ವ್ಯವಸ್ಥಿತವಾಗಿ ಬರುವುದನ್ನು ನೋಡುತ್ತೇವೆ, ಆದರೆ ಇಲ್ಲಿ ಸ್ನಾನಿಕ ಯೊವಾನ್ನರ ಬಗ್ಗೆ ಯಾವ ಮಾಹಿತಿ ಇಲ್ಲದೆ ಹೋದರೂ ಅವರ ಬೋಧನೆಯ ಬಗ್ಗೆ ಮಾಹಿತಿ ಇದೆ.
3) ಇತರೆ ಶುಭಸಂದೇಶಗಳು ಯೇಸು ಸ್ವಾಮಿಯ ದೀಕ್ಷಾಸ್ನಾನದ ಪ್ರಕರಣವನ್ನು ನಮಗೆ ತಿಳಿಸುತ್ತದೆ ಆದರೆ ಈ ಶುಭಸಂದೇಶದಲ್ಲಿ ದೀಕ್ಷಾಸ್ನಾನದ ಪ್ರಕರಣದ ಬಗ್ಗೆ ಸ್ನಾನಿಕ ಯೊವಾನ್ನನು ಸಾಕ್ಷಿ ನೀಡುವುದನ್ನು ಕಾಣುತ್ತೇವೆ. "ಪಾರಿವಾಳದ ರೂಪದಲ್ಲಿ ಪವಿತ್ರಾತ್ಮ ಸ್ವರ್ಗದಿಂದ ಇಳಿದು ಬಂದು ಅವರ ಮೇಲೆ ನೆಲೆಸುವುದು ನಾನು ನೋಡಿದೆನು".( ಯೊವಾನ್ನ 1:32)
4) ಯೇಸುಸ್ವಾಮಿಯ ಶೋಧನೆಯ (ಸೈತಾನನ ಪ್ರಲೋಭನೆ) ಬಗ್ಗೆ ಈ ಶುಭಸಂದೇಶದಲ್ಲಿ ನಮಗೆ ಕಾಣಸಿಗುವುದಿಲ್ಲ.
5) ಪ್ರೇಷಿತರ ಆಯ್ಕೆ, ಕರೆ, ನಿಯೋಗದ ಬಗ್ಗೆ ಯಾವುದೇ ಮಾಹಿತಿಯನ್ನು ಈ ಶುಭಸಂದೇಶದಲ್ಲಿ ನಾವು ನೋಡುವುದಿಲ್ಲ.
6) ಯೇಸುಸ್ವಾಮಿಯ ಪ್ರಸಿದ್ಧವಾದ ಸಾಮತಿಯ ಬೋಧನ ಶೈಲಿ ಅಥವಾ ಸಾಮತಿಗಳು ಇಲ್ಲಿ ಕಾಣುವುದಿಲ್ಲ.
7) ಬಹುತೇಕ ಸೌಖ್ಯ ಹೊಂದಿದಂತಹ ಪವಾಡಗಳು ಇಲ್ಲಿ ದಾಖಲಾಗಿಲ್ಲ.
8) ಬಲು ಮುಖ್ಯವಾದ ಯೇಸುಸ್ವಾಮಿಯ ಪರ್ವತ ಬೋಧನೆ ಇಲ್ಲಿ ಕಾಣದಾಗಿದೆ.
9) ಸ್ವರ್ಗ ಸಾಮ್ರಾಜ್ಯದ ಕಲ್ಪನೆಯನ್ನು ನಾವು ಇಲ್ಲಿ ಇಲ್ಲದೆ ಇರುವುದನ್ನು ಗಮನಿಸಬಹುದಾಗಿದೆ.
10) ಕಡೆಯ ರಾತ್ರಿಯ ಭೋಜನದ ಪ್ರಕರಣದಲ್ಲಿ ಪರಮಪ್ರಸಾದ ಸ್ಥಾಪನೆಯ ಪದಗಳು ಇಲ್ಲಿ ಗೋಚರವಾಗುವುದಿಲ್ಲ.
ಸಾಮ್ಯತೆಗಳು
ಈಗ ಯೊವಾನ್ನರ ಶುಭ ಸಂದೇಶಕ್ಕೂ ಹಾಗೂ ಇತರ ಶುಭಸಂದೇಶಗಳಿಗೂ ಇರುವ ಸಾಮ್ಯತೆಗಳ ಬಗ್ಗೆ ನೋಡೋಣ.
1) ಎರಡು ಶುಭಸಂದೇಶಗಳಲ್ಲಿ ಸಾಹಿತ್ಯದ ಪ್ರಕಾರಗಳಲ್ಲಿ ಒಂದು ಕರಾರಿದೆ. ಎರಡು ಸಹ ಸಾಮ್ಯತೆಗಳನ್ನು ಹೊಂದಿದೆ. ಅದು ಯೇಸುಸ್ವಾಮಿಯ ಬಹಿರಂಗ ಜೀವನ ,ಯಾತನೆ, ಮರಣ ಹಾಗೂ ಪುನರುತ್ಥಾನದಿಂದ ಕೂಡಿದೆ.
2) ಯೇಸು ಸ್ವಾಮಿ ತಮ್ಮ ಕಾರ್ಯಗಳನ್ನು ಹಾಗೂ ಪವಾಡಗಳನ್ನು ಎರಡು ಪ್ರಮುಖ ಸ್ಥಳಗಳಲ್ಲಿ ಮಾಡಿದ್ದಾರೆ. ಈ ಸ್ಥಳಗಳ ಉಲ್ಲೇಖದ ಬಗ್ಗೆ ಇಲ್ಲಿ ಸಾಮ್ಯತೆಯನ್ನು ಕಾಣಬಹುದಾಗಿದೆ. (ಗಲಿಲೇಯ ಹಾಗು ಜೆರುಸಲೆಮ್)
3) ಯೇಸುಸ್ವಾಮಿಯ ಬಹಿರಂಗ ಜೀವನದಲ್ಲಿ ಗುರುತಿಸಿಕೊಂಡಂತಹ ಬಹುತೇಕ ವ್ಯಕ್ತಿಗಳು ಹಾಗೂ ಸ್ಥಳಗಳ ಉಲ್ಲೇಖದ ಬಗ್ಗೆ ಸಾಮ್ಯತೆಯನ್ನು ಹೊಂದಿದೆ.
ಮುಂದುವರಿಯುವುದು
No comments:
Post a Comment