ನೆನ್ನೆ ಮೊನ್ನೆಯವರೆಗೆ...
ಡೇವಿಡ್ ಕುಮಾರ್. ಎ
ನೆನ್ನೆ ಮೊನ್ನೆಯವರೆಗೆ
ಒಬ್ಬರನೊಬ್ಬರ ಟೀಕಿಸಲು
ಪೆನ್ನುಗಳ ಮರೆ ಹೊಕ್ಕೆವು
ಇಂದು, ಸಣ್ಣ ಸಿಟ್ಟಿಗೂ
ಗನ್ನು, ಬಾಂಬುಗಳ ತಂದೆವು
ನೆನ್ನೆಯವರೆಗೆ,
ರಾಮ ರಹೀಮರಿಗೆ
ಒಂದೇ ಪಂಕ್ತಿಯ ಊಟ,
ಇಂದು, ‘ಭಕ್ತ’ ‘ಉಗ್ರ’ ರೆಂಬ
ಆರೋಪಗಳ ಕಾದಾಟ
ಮೊನ್ನೆಯವರೆಗೆ,
ಜಾತಿ ಮೀರಿದ ಪ್ರೀತಿ
ಧರ್ಮದಾಚೆಗಿನ ದಯೆ,
ಇಂದು, ಕಾಮಾಲೆ ಕಣ್ಣಿನಲಿ
ಹಣೆ ಪಟ್ಟಿಗಳ ಹಚ್ಚಿ
ಗುಂಪು ಬಣಗಳ ದ್ವೇಷ.
ನೆನ್ನೆಯವರೆಗೆ
ತ್ರಿವರ್ಣ ಧ್ವಜದ
ರಂಗು ರಂಗಿನ ಹಾರಾಟ
ಇಂದು, ಹಸುರಿಲ್ಲ, ಬಿಳಿಯಿಲ್ಲ
ಕೋಮು ಕೇಸರಿಯ ದಳ್ಳುರಿ
ಮೊನ್ನೆಯವರೆಗೆ,
ರಾಷ್ಟ ಪ್ರೇಮವೆಂದರೆ
ಸಹೋದರತ್ವ, ಸಾಮರಸ್ಯ,
ಕಾನೂನು ಸುವ್ಯವಸ್ಥೆ,
ಇಂದು, ಅಂಧ ಭಕ್ತಿ, ಅಸಹನೆ
ಪಿಸ್ತೂಲು ಹಿಡಿದ ಉಗ್ರನ ಮುಂದೆ
ಪೆÇೀಲಿಸರ ಜಾಣ ಮೌನ !
--0--0--0-
No comments:
Post a Comment