- ಜೀವಸೆಲೆ
ಮೌನದಲ್ಲಿ ಹಾಡಾದ
ನನ್ನ ಮಾತುಗಳು
ಖಾಲಿ ಶಬ್ದಗಳಲ್ಲ...
ನಿನ್ನ ಅರಿವ ತಿಳಿಹೇಳುವ
ನಿನ್ನದೇ ಆತ್ಮಸೃಷ್ಟಿ
-------
ನನ್ನ ಬದುಕ ಪುಸ್ತಕದಲ್ಲಿ
ನಿನ್ನದಚ್ಚಿಲ್ಲದ ಒಂದಾಳೆಯು
ಕಾಣದಾಗ
ಅರಿವಾಗಿದ್ದು:
ಈ ಬದುಕು ನೀ ಬರೆಯುವ ದಿನಚರಿ! ಎಂದು
-----
ದಿನಪತ್ರಿಕೆಯ
ಓದುತ್ತಾ ಓದುತ್ತಾ
ನಿಟ್ಟುಸಿರಿನಿಂದ ಹೇಳಿದ್ದು
ಮನುಷ್ಯನಿಗೆ ನೀ ಮನುಷ್ಯನೆಂದು
ತಿಳಿ ಹೇಳುವ ಅಗಾಧ ಸಮಾಜಮುಖೀ
ಪ್ರವಾದಿ ನೀನು ಬರಬೇಕೆಂದು
-0--0--0--0--0--0-
No comments:
Post a Comment