Thursday, 13 February 2020

ಭಾರತದಲ್ಲಿ ಮನೋರೋಗದ ಹೆಚ್ಚಳ


ಯೊಗೇಶ್ ಮಾಸ್ಟರ್

ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಬೆಳಕಿಗೆ ಬಂದ ವಿಷಯವಿದು. ಭಾರತದ ಜನಸಂಖ್ಯೆಯಲ್ಲಿ ನೂರಕ್ಕೆ ಸುಮಾರು 7.5 ರಷ್ಟು ಜನ ಒಂದಲ್ಲಾ ಒಂದು ಮನೋರೋಗದಿಂದ ಬಳಲುತ್ತಿದ್ದಾರೆ. ಈ ಮನೋರೋಗ  ಆರನೇ ಒಂದರಷ್ಟು ಆರೋಗ್ಯದ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ವಿಶ್ವದ ಸುಮಾರು ಶೇಕಡಾ ಹದಿನೈದರಷ್ಟು ಮಾನಸಿಕ ಮತ್ತು ನರದೌರ್ಬಲ್ಯದ ಸಮಸ್ಯೆಗಳನ್ನು ಭಾರತ ತಾನೊಂದೇ ಹೊತ್ತುಕೊಂಡಿದೆ. ಇದೇ ವಿಶ್ವ ಆರೋಗ್ಯ ಸಂಸ್ಥೆಯು ಮುಂದುಗಾಣುವ ಅಂಕಿಅಂಶಗಳ ಪ್ರಕಾರ ಇದೇ 2020ರ ಕೊನೆಯ ಹೊತ್ತಿಗೆ ಸುಮಾರು ಶೇಕಡಾ 20ರಷ್ಟು ಜನರು ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿರುತ್ತಾರೆ. ಇನ್ನೂ ಗಾಬರಿಯ ವಿಷಯವೆಂದರೆ ಭಾರತದಲ್ಲಿ ನುರಿತ ಮತ್ತು ವೃತ್ತಿಪರ ಮನೋರೋಗ ತಜ್ಞರು ಸುಮಾರು ನಾಲ್ಕು ಸಾವಿರಕ್ಕೂ ಕಡಿಮೆ ಇದ್ದಾರೆ. 
ಭಾರತದಲ್ಲಿ ಮಾನಸಿಕ ಸಮಸ್ಯೆಗಳು ಮತ್ತು ಮನೋರೋಗಗಳು ಇಷ್ಟರ ಮಟ್ಟಿಗೆ ತೀವ್ರತರವಾಗಿದ್ದರೂ, ಕೆಲವು ಅಂಕಿಅಂಶಗಳ ಪ್ರಕಾರ ಸೈಕ್ರಿಯಾಟ್ರಿಸ್ಟ್‍ಗಳ ಸಂಖ್ಯೆ ಪ್ರತಿ ಹತ್ತುಸಾವಿರ ಜನಕ್ಕೆ ಒಂದಕ್ಕಿಂತ ಕಡಿಮೆ ಇದ್ದಾರೆ. ಇನ್ನು ಸಮಾಲೋಚಕರು ಎಂದರೆ ಒಂದೋ ಕನಿಷ್ಠ ತರಬೇತಿ ಪಡೆದವರು ಅಥವಾ ತರಬೇತಿಯನ್ನೇ ಪಡೆಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ವಿಶ್ಲೇಷಣೆಗಳು ವೈಜ್ಞಾನಿಕವಾಗಿರದೇ ಕೆಲವು ಸಲ ಸಹಾಯವಾಗುವುದಕ್ಕಿಂತ ತೊಂದರೆಯೇ ಆಗಬಹುದು. 
ಒಟ್ಟಾರೆ ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆ ಮಾತನ್ನು ನಿಜವಾಗಿಸುವಂತಹ ಪ್ರಯತ್ನದಲ್ಲಿದೆ ನಮ್ಮ ಸದ್ಯದ ಮಾನಸಿಕ ಆರೋಗ್ಯ ನಿರ್ವಹಣೆಯ ವ್ಯವಸ್ಥೆ. 
ಭಾರತದಲ್ಲಿ ಮಾನಸಿಕ ಆರೋಗ್ಯ ನಿರ್ವಹಣೆಯ ವ್ಯವಸ್ಥೆ ಹದಗೆಡಲು ಕಾರಣವೇನು ಎಂಬುದನ್ನು ಗಮನಿಸಿದರೆ ಮೊಟ್ಟ ಮೊದಲನೆಯದಾಗಿ ನಿರ್ಲಕ್ಷ್ಯ, ತನ್ನಲ್ಲಿ ಮಾನಸಿಕ ಸಮಸ್ಯೆ ಇರುವುದೇ ಇಲ್ಲ ಎಂಬ ಭ್ರಮೆ, ಆತ್ಮಾವಲೋಕನ ಅಥವಾ ಸ್ವಯಂವಿಶ್ಲೇಷಣೆಗೆ ತಯಾರಿಲ್ಲದಿರುವುದು, ಸಾಮಾಜಿಕ ಕಳಂಕವೆಂಬಂತೆ ಮನೋರೋಗವನ್ನು ಕಾಣುವುದು; ಹೀಗೆ ಹಲವು ಕಾರಣಗಳಿವೆ. ಆದರೆ ಮಾನಸಿಕ ಆರೋಗ್ಯದ ವ್ಯವಸ್ಥೆಯನ್ನು ಕಾಪಾಡುವ ವಾತಾವರಣವನ್ನು ನಿರ್ಮಾಣ ಮಾಡುವುದರಲ್ಲಿ ಮತ್ತು ಅದರ ಬಗ್ಗೆ ಅರಿವು ನೀಡುವುದರಲ್ಲಿ ಶಿಕ್ಷಣ ಸಂಸ್ಥೆಗಳು ಮೊಟ್ಟ ಮೊದಲನೆಯ ಸ್ಥಾನವನ್ನು ಹೊಂದಲು ಸಾಧ್ಯ. ವಾಸ್ತವವಾಗಿ ಇದು ಮನೆಯಲ್ಲಿಯೇ ಪ್ರಾರಂಭವಾಗಬೇಕು. ಆದರೆ ಭಾರತವಿನ್ನೂ ಗುಣಮಟ್ಟದ ಜೀವನ, ಆಲೋಚನೆ, ಆರ್ಥಿಕ ಸ್ಥಿತಿ, ಶಿಕ್ಷಣ, ಉದ್ಯೋಗ, ಗಳಿಕೆ, ಸಂವಹನ, ಸಂವೇದನೆ, ಸಂಬಂಧ, ಆಡಳಿತ ವ್ಯವಸ್ಥೆಗಳನ್ನು ಅಗತ್ಯವಿರುವಷ್ಟರ ಮಟ್ಟಿಗೆ ಖಂಡಿತ ಹೊಂದಿಲ್ಲ. ಹಾಗಾಗಿ ಮನೆಯೇ ಮೊದಲ ಪಾಠಶಾಲೆಯಾದರೂ, ಮನೆಗಳನ್ನು ನೆಚ್ಚಿಕೊಳ್ಳುವಷ್ಟು ಧೈರ್ಯ ತಾಳಲಾಗದು. ಹೋಗಲಿ, ಶಿಕ್ಷಣ ಸಂಸ್ಥೆಗಳಾದರೂ ಈ ಪಾತ್ರವನ್ನು ವಹಿಸಬೇಕು. ಆದರೆ ಮಗುವಿನ ಉಚ್ಚಾರಣೆಯ ಸಮಸ್ಯೆಯನ್ನು ಅಥವಾ ಕಲಿಕೆಯ ನ್ಯೂನ್ಯತೆಯನ್ನು ಅಣಕಿಸುವ ಅಥವಾ ದಂಡಿಸುವ ಕುಚೇಷ್ಟೆಯ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸುತ್ತಾ ಮಜ ತೆಗೆದುಕೊಳ್ಳುವ ಶಿಕ್ಷಕರು ಶಿಕ್ಷಣ ಸಂಸ್ಥೆಗಳಲ್ಲಿದ್ದರೆ ಎಂತಹ ಮಾನಸಿಕ ಆರೋಗ್ಯದ ಪ್ರತಿನಿಧಿಗಳನ್ನು ನಾವು ನಿರೀಕ್ಷಿಸಬಹುದು! 

ಮನೋರೋಗ ಮತ್ತು ಮಕ್ಕಳು 

ಈಗ ಸದ್ಯಕ್ಕೆ ರೋಗವನ್ನು ತಡೆಗಟ್ಟುವಿಕೆಯೇ (ಠಿಡಿeveಟಿಣioಟಿ) ರೋಗಕ್ಕೆ ಮದ್ದಾಗಿದೆ. ವ್ಯಕ್ತಿ, ಕುಟುಂಬ, ಸಮಾಜ ಮತ್ತು ವ್ಯವಸ್ಥೆಗಳು ಈ ಮನೋರೋಗದಿಂದ ಮುಕ್ತವಾಗಬೇಕಾದರೆ ಕುಟುಂಬ ಮತ್ತು ಶಿಕ್ಷಣ ಸಂಸ್ಥೆಗಳು ಬಹಳ ಗಂಭೀರವಾಗಿ ಮಗುತನವನ್ನು ಜತನ ಮಾಡುವ ಜವಾಬ್ದಾರಿಯನ್ನು ಹೊರಬೇಕು. 
ಮಗುವಿಗೆ ಆಹಾರ, ಆಶ್ರಯ, ಶಿಕ್ಷಣ ಮತ್ತು ಆರೋಗ್ಯವನ್ನು ಸಮರ್ಪಕವಾಗಿ ಮತ್ತು ಸಮಯಾನುಸಾರವಾಗಿ ಒದಗಿಸುವುದು ಕುಟುಂಬದ ಕರ್ತವ್ಯವಾಗಿದೆ. ಹಾಗೆಯೇ ಆರೋಗ್ಯವೆಂದರೆ ಶಾರೀರಿಕ ಮಾತ್ರವಲ್ಲದೇ ಮಾನಸಿಕವೂ ಕೂಡ ಆಗಿದೆ. ಹೇಗೆ ಸಿಡುಬು, ದಢಾರ, ಕಾಮಾಲೆ, ಪೆÇೀಲಿಯೋ ಇತ್ಯಾದಿ ರೋಗಗಳು ಬರದಂತೆ ಲಸಿಕೆಗಳನ್ನು ಹಾಕಿಸುತ್ತೇವೆಯೋ ಹಾಗೆಯೇ ಮಾನಸಿಕ ಅಸ್ವಸ್ಥತೆಗಳಿಗೆ ಮಕ್ಕಳು ಬಲಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕುಟುಂಬ ಮತ್ತು ಶಿಕ್ಷಣ ಸಂಸ್ಥೆಗಳು ಎಚ್ಚರಿಕೆಯನ್ನು ವಹಿಸಬೇಕಿದೆ. ಶಾರೀರಿಕ ಮತ್ತು ಸಾಂಕ್ರಮಿಕ ರೋಗಗಳಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆಗಳನ್ನು ಕೊಡಿಸಿದಷ್ಟು ಸುಲಭದ ಕೆಲಸವಲ್ಲ ಮಾನಸಿಕ ಸಮಸ್ಯೆಗಳಿಗೆ ಅಥವಾ ಮನೋರೋಗಗಳ ಮುಂಜಾಗರೂಕತ ಕ್ರಮಗಳು. ಆದರೂ ತಿಳುವಳಿಕೆ, ಜಾಗ್ರತೆ, ಶಿಸ್ತು, ಸಂಯಮ ಮತ್ತು ದೂರದೃಷ್ಟಿಯನ್ನು ಹೊಂದಿದರೆ ಕಷ್ಟವೇನಲ್ಲ. ಮೊಟ್ಟ ಮೊದಲು ಹಿರಿಯರು ಸಂಕಲ್ಪ ಮಾಡಬೇಕಾಗಿರುವುದು ಯಾವುದೇ ಮಗುವಿನ ಮಗುತನವನ್ನು ಜೋಪಾನ ಮಾಡುತ್ತೇನೆಂದು. 
ವಿದ್ಯಾವಂತ ಮತ್ತು ಸ್ಥಿತಿವಂತ ಕುಟುಂಬಗಳಲ್ಲಿಯೇ ಈ ಮಾನಸಿಕ ಆರೋಗ್ಯದ ಕಡೆಗೆ ಗಮನ ಕೊಡುತ್ತಿರುವುದು ಕಡಿಮೆ ಪ್ರಮಾಣದಲ್ಲಿರುವಾಗ ಇನ್ನು ಅವಿದ್ಯಾವಂತ ಮತ್ತು ಕಡಿಮೆ ವರಮಾನದ, ಹೊತ್ತುಹೊತ್ತಿಗೆ ದುಡಿದುಕೊಂಡು ತಿನ್ನಬೇಕಾಗಿರುವವರ ಮನೆಗಳಲ್ಲಿ ಇದರ ಬಗ್ಗೆ ಜಾಗೃತಿ ಮತ್ತು ತಿಳುವಳಿಕೆ ತೀರಾ ಚಿಂತಾಜನಕಸ್ಥಿತಿಯಲ್ಲಿರುತ್ತದೆ.

ಅನುತ್ಪಾದಕರಲ್ಲಿ ((Uಟಿಠಿಡಿoಜuಛಿಣive ಠಿeoಠಿಟe) ಮನೋರೋಗದ ತೀವ್ರತೆ
ಯಾವ ಮಕ್ಕಳಿಗೆ ಮಾನಸಿಕ ಆರೋಗ್ಯ ಮತ್ತು ಶಿಕ್ಷಣದೊಂದಿಗೆ ಸ್ಪಷ್ಟ ಔದ್ಯೋಗಿಕ ಗುರಿಯನ್ನು ನೀಡಿಲ್ಲವಾದರೆ ಅವರು ವಯಸ್ಕರಾಗುವ ಹಂತದಲ್ಲಿ ಅನುತ್ಪಾದಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಜೊತೆಗೆ ತಮ್ಮ ಆರ್ಥಿಕತೆಗೆ ಯಾವುದಾದರೂ ಕೆಲಸಕ್ಕೆ ಹೋಗುವ ಅನಿವಾರ್ಯತೆಯು ಉಂಟಾಗಿ ವಿದ್ರೋಹದ ಚಟುವಟಿಕೆಗಳಿಂದ ಹಣ ಬರುವುದಾದರೆ ಅದಕ್ಕೂ ಸಮ್ಮತಿಸುತ್ತಾರೆ. ಇದರಿಂದ ಅಂತಹ ಮಾನವ ಸಂಪನ್ಮೂಲಗಳನ್ನು ಹಣವುಳ್ಳ ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ವ್ಯವಸ್ಥೆಯು ತನ್ನ ನಕಾರಾತ್ಮಕ ಕೆಲಸಕ್ಕೆ ಕೂಡಾ ಉಪಯೋಗಿಸಿಕೊಳ್ಳಬಹುದು. ಹಾಗಾಗಿ ಮಕ್ಕಳು ಕಿಶೋರಾವಸ್ಥೆಯಿಂದ ಪ್ರೌಢಾವಸ್ಥೆಗೆ ಹೋಗುವ ಸಮಯದಲ್ಲಿಯೇ ಅವರನ್ನು ಗಂಭೀರವಾಗಿ ಗಮನಿಸಬೇಕು ಮತ್ತು ಅವರ ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕತೆಗೆ ಸ್ಪಷ್ಟವಾದ ರೂಪುರೇಶೆಗಳನ್ನು ನಿರ್ಮಿಸಬೇಕು. ಅದರೊಟ್ಟಿಗೆ ಬಹಳ ಮುಖ್ಯವಾಗಿ ಅವರ ಮಾನಸಿಕ ಆರೋಗ್ಯದ ನಿರ್ವಹಣೆ ಜೊತೆಯಾಗಲೇ ಬೇಕು. ಅನುತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳಲ್ಲಿ ಮನೋರೋಗಗಳು ತೀವ್ರತರದಲ್ಲಿರುತ್ತದೆ. ಈ ಕಾರಣಕ್ಕಾಗಿಯೇ ಸಂಘಟನಾತ್ಮಕ, ರಚನಾತ್ಮಕ, ಸೃಜನಶೀಲಾತ್ಮಕ ಮತ್ತು ಉತ್ಪಾದಕ ಚಟುವಟಿಕೆಗಳ ತರಬೇತಿಯ ಅಗತ್ಯ ಮಕ್ಕಳಿಗೆ ಬೇಕಾಗುವುದು. 
ವಿಶ್ವ ಸಂಸ್ಥೆಯು 2019ರಲ್ಲಿ ಪ್ರಕಟಿಸಿರುವ ವರದಿಯ ಪ್ರಕಾರ ಭಾರತದಲ್ಲಿ ಸುಮಾರು, ಪ್ರೌಢಾವಸ್ಥೆಗೆ ಹೋಗುತ್ತಿರುವ ನಾಲ್ಕು ಮಕ್ಕಳಲ್ಲಿ ಒಂದು ಮಗು ಖಿನ್ನತೆಗೆ ಒಳಗಾಗಿರುತ್ತದೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಯೋಜನೆಗಳನ್ನು ಮತ್ತು ಕೈಪಿಡಿಗಳನ್ನು ರಚಿಸಿದೆ. ಅವು ಮಕ್ಕಳ ಮನಸ್ಸಿನ ಮತ್ತು ಶರೀರದ ಆರೋಗ್ಯದ ಬಗ್ಗೆ ಇರುವ ಕಾಳಜಿಯಿಂದಾಗಿ ರೂಪುಗೊಂಡಿವೆ. ಅವುಗಳೇನೆಂದು ಮುಂದೆ ನೋಡೋಣ.

-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...