Thursday, 13 February 2020

ಓದಿದ ಪುಸ್ತಕದಿಂದ



ಒಂದು ಯಥಾವತ್ತಾದ ಆತ್ಮಕಥೆಯನ್ನು ಬರೆಯಲು ಪ್ರಯತ್ನಿಸುವುದು ನನ್ನ ಉದ್ದೇಶವಲ್ಲ. ನಾನು ಹೇಳಬಯಸುವುದು ಸತ್ಯಶೋಧನೆಯ ನನ್ನ ಅನೇಕ ಪ್ರಯೋಗಗಳ ಕಥೆಯನ್ನು ಮಾತ್ರ. ನನ್ನ ಜೀವನ ಈ ಪ್ರಯೋಗಗಳ ಹೊರತು ಮತ್ತೇನೂ ಅಲ್ಲ. ಆದುದರಿಂದ ಈ ಕಥೆ ಆತ್ಮಕಥೆಯ ರೂಪವನ್ನು ಹೊಂದುವುದೂ ಸತ್ಯ. ಇದರ ಪ್ರತಿಯೊಂದು ಪುಟದಲ್ಲಿಯೂ ನನ್ನ ಪ್ರಯೋಗಗಳ ವಿಷಯವನ್ನೇ ಹೇಳುವುದಾದರೂ ನನಗೆ ಚಿಂತೆಯಿಲ್ಲ. ಈ ಎಲ್ಲ ಪ್ರಯೋಗಗಳ ಒಟ್ಟು ಕಥೆ ವಾಚಕರಿಗೆ ಲಾಭವಾಗದಿರದೆಂದು ನಾನು ನಂಬುತ್ತೇನೆ. ಈಗ, ರಾಜಕೀಯ ಕ್ಷೇತ್ರದ ನನ್ನ ಪ್ರಯೋಗಗಳು ಭಾರತದಲ್ಲಿ ಮಾತ್ರವೇ ಅಲ್ಲದೆ "ನಾಗರಿಕ" ಪ್ರಪಂಚಕ್ಕೆಲ್ಲ ತಕ್ಕಮಟ್ಟಿಗೆ ಗೊತ್ತಾಗಿದೆ. ಅವುಗಳಿಂದ ನನಗೆ ಬಂದಿರುವ "ಮಹಾತ್ಮ" ಎಂಬ ಬಿರುದು ನನಗೆ ಇನ್ನೂ ಕಡಿಮೆ ಬೆಲೆಯುಳ್ಳದ್ದು. ಅನೇಕ ವೇಳೆ ಈ ಬಿರುದು ನನಗೆ ನೋವನ್ನುಂಟುಮಾಡಿದೆ. ಇದರಿಂದ ಒಂದು ಕ್ಷಣವಾದರೂ ನಾನು ಉಬ್ಬಿಹೋದುದು ನನಗೆ ನೆನಪಿಲ್ಲ. ಆದರೆ ಆಧ್ಯಾತ್ಮ ಕ್ಷೇತ್ರದಲ್ಲಿ ನಾನು ನಡೆಸಿದ ಪ್ರಯೋಗಗಳನ್ನು ವಿವರಿಸುವುದು ನನಗೆ ನಿಜವಾಗಿಯೂ ಇಷ್ಟ. ಇವು ಗೊತ್ತಿರುವುದು ನನಗೆ ಮಾತ್ರ. ಈ ಪ್ರಯೋಗಗಳು ರಾಜಕೀಯ ಕ್ಷೇತ್ರದಲ್ಲಿ ಕೆಲಸಮಾಡಲು ನನಗೆ ಶಕ್ತಿಯನ್ನು ಕೊಟ್ಟಿವೆ. ಇವುಗಳಿಂದ ನನ್ನ ನಮ್ರತೆಯೇ ಹೆಚ್ಚಾಗಬಲ್ಲದು, ನಾನು ನನ್ನಲ್ಲೇ ಆಲೋಚನೆ ಮಾಡಿ ಹಿನ್ನೋಟ ಬೀರಿದಂತೆ ನನ್ನ ದೌರ್ಬಲ್ಯ ನನಗೆ ಹೆಚ್ಚು ಸ್ಪಷ್ಟವಾಗಿ ಅನುಭವವಾಗುತ್ತಿದೆ..

ಆತ್ಮ ಕಥೆ ಅಥವಾ ನನ್ನ ಸತ್ಯಾನ್ವೇಷನೆ
ಮೂಲ ಲೇಖಕರು: ಮಹಾತ್ಮ ಗಾಂಧೀ
ಕನ್ನಡಕ್ಕೆ ಅನುವಾದ: ಗೊರೂರು ರಾಮಸ್ವಾಮಿ ಅಯ್ಯಂಗಾರ್

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...