Thursday, 13 February 2020

ಗೀತಾಂಜಲಿಯ ತುಣುಕು

ಮುಟ್ಠಾಳನೇ,
ಹೊತ್ತುಕೊ ನಿನ್ನನೇ ಹೆಗಲಲಿ,
ಓ ತಿರುಪೆಯವನೇ,
ತಿರಿ ಮೊದಲು ನಿನ್ನದೇ ಮನೆಯ ಬಾಗಿಲಲಿ.
ಹೊರುವವನಿಗೆ ನಿನ್ನ ಹೊರೆಯ ಬಿಟ್ಟುಬಿಡು,
ಮತ್ತೆಂದೂ ತಿರುಗಿ ನೋಡಿ ಮರುಗದಿರು.
ಜ್ಯೋತಿಯದು ಸೂಲಿನಿಂದ
ಆತುಕೊಂಡಿಹುದು ಹಣತೆಗೆ,
ಒಮ್ಮೆಲೇ ನೀನು ಅದನು
ಊದಿಬಿಡುವುದು ಬಯಕೆಯೇ?
ಅಮಂಗಳ ಅಮಂಗಳ?
ಅದರ ಕೊಳಕು ಕೈಗಳಿಂದ ಏನನೂ ಬಯಸದಿರು.
ಪವಿತ್ರ ಪ್ರೀತಿಯಿಂದ ಕೊಟ್ಟಾಗಲೇ ತೆಗೆದುಕೋ.

(ಟ್ಯಾಗೋರರ O fool, , try to carry thyself  ಪದ್ಯದ ಭಾವಾನುವಾದ: ಸಿ ಮರಿಜೋಸೆಫ್)

0-0-0-0-0

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...