ಜೋವಿ
ಈಗಿನ ವಿದ್ಯಮಾನಗಳ ಬಗ್ಗೆ ಹೇಳುವುದೇನಿದೆ? ದೇಶದ ಈಗಿನ ಪರಿಸ್ಥಿತಿಯ ಸಂಪೂರ್ಣ ಮಾಹಿತಿ ನಮಗೆ ಗೊತ್ತೇ ಇದೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಜನರು ಉದ್ಯೋಗಗಳನ್ನು ಕಳೆದುಕೊಂಡು ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ಇಲ್ಲಿಯತನಕ ದೇಶದ ಸುಮಾರು ಮೂರೂವರೆ ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಇನ್ನೊಂದು ಕಡೆ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ರೈತರ ಹೆಸರಿನಲ್ಲಿ ಅಧಿಕಾರ ದಕ್ಕಿಸಿಕೊಳ್ಳುವ ನಾಯಕರು, ಅಧಿಕಾರ ಸಿಕ್ಕಿದಾಕ್ಷಣ ರೈತರನ್ನು ಮರೆತೇಬಿಡುವ ಚಾಳಿ ಅವರಲ್ಲಿ ಎದ್ದು ಕಾಣುತ್ತಿದೆ. ಒಟ್ಟಾರೆ ದೇಶದ ಆರ್ಥಿಕ ಸ್ಥಿತಿಯನ್ನು ಸೂಚಿಸುವ ಜಿಡಿಪಿ ನೆಲಕಚ್ಚುತ್ತಿದೆ. ದೇಶದ ಇಂತಹ ಗಂಭೀರ ಪರಿಸ್ಥಿತಿಯನ್ನು ಅವಲೋಕಿಸಿ, ವ್ಯವಸ್ಥೆಯ ಸರಿಪಡಿಸುವಿಕೆಗೆ ಕೈಗೊಳ್ಳಬೇಕಾದ ಚಿಕಿತ್ಸಾ ಕ್ರಮಗಳ ಬಗ್ಗೆ ಯೋಚಿಸದೆ, ಬೇಡವಾದ, ಅಪ್ರಸ್ತುತ ಕಾರ್ಯಕ್ರಮಗಳನ್ನು, ಕಾಯ್ದೆಗಳನ್ನು ಕೈಗೆತ್ತಿಕೊಂಡು ದೇಶವನ್ನು ಸಮಸ್ಯೆಗಳ ಗೂಡಾಗಿಸಿಬಿಟ್ಟಿದೆ ನಮ್ಮ ಸರ್ಕಾರ. ಅಷ್ಟು ಮಾತ್ರವಲ್ಲದೆ ಇರುವ ಸಮಸ್ಯೆಗಳನ್ನು ಅಲ್ಲಗಳೆಯುತ್ತಾ, ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಾ ಜನರ ಗಮನವನ್ನು ಅನಾವಶ್ಯಗಳ ವಿಷಯಗಳತ್ತ ಜಾರಿಸಲು ಸರ್ಕಾರವು ಹರಸಾಹಸ ಪಡುತ್ತಿರುವುದು ನಾಚಿಕೆಗೇಡಿನ ಸಂಗತಿಯೆಂದೇ ಹೇಳಬಹುದು.
ಆದರೆ ನಮ್ಮ ಜನರು ಎಚ್ಚೆತ್ತುಕೊಂಡಿದ್ದಾರೆ. ಸರ್ಕಾರದ ಅಸಲಿತನವನ್ನು ಅರಿತು ಸ್ವಯಂಪ್ರೇರಣೆಯಿಂದ ಬೀದಿಗಿಳಿದಿದ್ದಾರೆ. ಸಮಾಜವನ್ನು ವಿಭಾಗಿಸುವ ಸರ್ಕಾರದ ಹುನ್ನಾರ ಷಡ್ಯಂತ್ರಗಳ ವಿರುದ್ಧ ಒಕ್ಕೊರಲಿನಿಂದ ಪ್ರತಿರೋಧ ಒಡ್ಡುತ್ತಿದ್ದಾರೆ. ಇಂತಹ ಪ್ರತಿರೋಧ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿಗಳು ಅದರಲ್ಲೂ ಮಹಿಳೆಯರು ಬಹುಸಂಖ್ಯೆಯಲ್ಲಿ ಕಾಣುತ್ತಿರುವುದು ಒಂದು ಧನಾತ್ಮಕವಾದ ಬೆಳವಣಿಗೆ. ಹೌದು, ಸರ್ಕಾರ ಹೊರಡಿಸಿರುವ ಕಾಯ್ದೆಗಳ ವಿರುದ್ಧ ಸಾವಿರಾರು ಜನರು ಧೈರ್ಯದಿಂದ ಪ್ರಟಿಭಟಿಸುತ್ತಿದ್ದಾರೆ. ಈ ಪ್ರತಿಭಟನೆಗಳು ಸಾವಿರಾರು ಭರವಸೆಯ ನಾಯಕರನ್ನು ಹುಟ್ಟಿಸುತ್ತಿವೆ. ಜೊತೆಗೆ ಸರ್ವಾಧಿಕಾರಿ ಸರ್ಕಾರಕ್ಕೆ ಪ್ರತಿರೋಧದ ಬಿಸಿಯನ್ನು ಮುಟ್ಟಿಸುತ್ತಾ ಎಚ್ಚರಿಕೆಯನ್ನು ಸಹ ನೀಡಿವೆ. ಪ್ರತಿಭಟಿಸುತ್ತಿರುವ ಜನರು ದೇಶದ ಮೇಲಿನ ಪ್ರೀತಿಗಾಗಿ ತಮ್ಮ ಭವಿಷ್ಯವನ್ನೇ ಅಡವಿಟ್ಟು ಐಕ್ಯತೆಗಾಗಿ ಶ್ರಮಿಸುತ್ತಿದ್ದಾರೆಯೇ ವಿನಃ ಇವರ್ಯಾರೂ ಬಾಡಿಗೆ ಬಂಟರಲ್ಲ. ದುಡ್ಡು ಮತ್ತು ಇನ್ನಿತರ ಆಮಿಷಗಳನ್ನು ಕೊಟ್ಟು ಪ್ರತಿಭಟನೆಗಳಿಗೆ ಕರೆಸಿಕೊಂಡವರಲ್ಲ. ಅವರಲ್ಲಿ ಹೆಚ್ಚು ಜನರು ಮೇಧಾವಿಗಳು, ವಸ್ತುನಿಷ್ಟೆಯಿಂದ ವಾಸ್ತವನ್ನು ವಿಮರ್ಶಿಸುವ ಚಿಂತಕರು, ಸಮಾನತೆಯ ಸಮಾಜಕ್ಕೆ ಹಾತೊರೆಯುವವರು. ಇವರೆಲ್ಲರೂ ಪ್ರಾಣಭಯವನ್ನು ಬಿಟ್ಟು ಸರ್ಕಾರದ ಅನೈತಿಕತೆಯನ್ನು, ಪ್ಯಾಸಿಸ್ಟ್ ಮುಖವನ್ನು ಜನರಿಗೆ ತಮ್ಮ ಮಾತುಗಳಿಂದ, ಬರಹಗಳಿಂದ, ಹಾಡುಕಾವ್ಯಗಳಿಂದ ಬಯಲು ಮಾಡುತ್ತಿದ್ದಾರೆ. ಇಂತಹ ಯುವ ನಾಯಕರನ್ನು ಸದೆಬಡಿಯಲು, ಸರ್ಕಾರವು ಪೆÇೀಲಿಸ್ ಪಡೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಪ್ರತಿಭಟನೆಗಾರರಿಗೆ ದೇಶದ್ರೋಹದ ಪಟ್ಟವನ್ನು ಕಟ್ಟಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಕೆಲವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಚಿತ್ರಹಿಂಸೆ ನೀಡಲಾಗುತ್ತಿದೆ. ಆದರೂ ಸರ್ಕಾರಕ್ಕೆ ಪ್ರತಿಭಟನೆಗಾರರನ್ನುಮೌನವಾಗಿಸಲಾಗುತ್ತಿಲ್ಲ. ಪ್ರತಿಭಟನೆಕಾರರು ಎದೆಗುಂದದೆ ಸರ್ಕಾರದ ಕೆಟ್ಟ ಸ್ವಭಾವದ ವಿರುದ್ಧ, ಕುತಂತ್ರ ನೀತಿಗಳ ವಿರುದ್ಧ ಶಾಂತಿಯಿಂದಲೇ ಪ್ರತಿಭಟಿಸುತ್ತಿದ್ದಾರೆ.
ಹೌದು, ಕೆಲ ಸಂಘಸಂಸ್ಥೆಗಳ ಕಾರ್ಯಸೂಚಿ ಪ್ರಕಾರ ತೆಗೆದುಕೊಂಡ ನಿರ್ಧಾರಗಳು ಸಂವಿಧಾನದ ಅಥವಾ ಸೌಹಾರ್ದದ ದೃಷ್ಟಿಕೋನದಿಂದ ಆಕ್ಷೇಪಾರ್ಹ ಆಗಿರಬಹುದು. ಅದು ಸ್ವಪ್ರತಿಷ್ಠೆಯ ಪ್ರಶ್ನೆಯಾಗದಂತೆ ನಿಯಂತ್ರಿಸುವುದು ಸರ್ಕಾರದ ಹೊಣೆಗಾರಿಕೆ. ಚುನಾವಣೆಯಲ್ಲಿ ಜನರು ಮತ ಕೊಟ್ಟ ಮಾತ್ರಕ್ಕೆ, ನಂತರದ ಗಂಭೀರ ಬೆಳವಣಿಗಳಿಗೆ, ಅನ್ಯಾಯಕ್ಕೆ ಮೂಕವಾಗಿರಬೇಕು ಎಂದು ಯಾವುದೇ ಸರ್ಕಾರ ಬಯಸಬಾರದು.
ಆದರೆ ಪ್ರತಿಭಟಿಸುತ್ತಿರುವ ಜನರಿಗಿಂತ ಹೆಚ್ಚು ಜನರು ಮೌನವಹಿಸಿ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ತಮ್ಮ ಮುಂದಿನ ಭವಿಷ್ಯಕ್ಕೆ ಪೆಟ್ಟಾಗಬಹುದೆಂಬ ಭೀತಿಯಿಂದ ಅಡ್ಡಗೋಡೆಯ ಮೇಲಿಟ್ಟ ದೀಪದಂತೆ ಬಾಯಿಗೆ ತಾವೇ ಬಟ್ಟೆ ಕಟ್ಟಿಕೊಂಡು ಮೂಕರಾಗಿಬಿಟ್ಟಿದ್ದಾರೆ. ಕೆಲವರನ್ನು ಹೊರತುಪಡಿಸಿ, ನಮ್ಮ ನಾಡಿನ ನಟನಟಿಯರು, ಆಟಗಾರರು, ಉದ್ಯಮಿಗಳು, ಕಲಾವಿದರು, ಬರಹಗಾರರು ಜಾಣ ಮೌನವಹಿಸಿ ಕುಳಿತಿದ್ದಾರೆ. ಸರ್ಕಾರದ ಪರ ವಹಿಸಿದವರಿಗೆ ಕೆಲವೊಂದು ಪ್ರಶಸ್ತಿಗಳು ಸಹ ದೊರಕಿವೆ. ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳದೆ ಮನೆಯಲ್ಲಿ ಕೂತು ತಮಾಷೆ ನೋಡುವ ಪಡೆ ಒಂದು ಕಡೆಯಾದರೆ, ದೇಶದ ಉತ್ತಮ ಭವಿಷ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ ಅನ್ಯಾಯವನ್ನು ಪ್ರತಿಭಟಿಸುತ್ತಿರುವ ಜನಪರ ಕಾರ್ಯಕರ್ತರ ಪಡೆ ಇನ್ನೊಂದು ಕಡೆ. ನಿರಂಕುಶ ಸರ್ಕಾರದ ಭಾಗವಾಗಿ ಕೆಲಸ ಮಾಡಲು ನಿರಾಕರಿಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವ ನಿವೃತ್ತ ಅಧಿಕಾರಿಗಳಾದ ಶಶಿಕಾಂತ್ ಸೆಂಥಿಲ್ ಮತ್ತು ಕಣ್ಣನ್ ಅವರು ಜನರ ನಾನಾ ಪ್ರತಿಭಟನೆಗಳಲ್ಲಿ ಭಾಗವಹಿಸಿ ಕಾಯ್ದೆಗಳ ನೂನ್ಯತೆಗಳ ಬಗ್ಗೆ, ಅಡ್ಡಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇನ್ನೊಂದು ಕಡೆ, ¥sóÁಯೆ ಡಿಸೋಜ (ಈಚಿಥಿe ಆ’Souzಚಿ) ಎಂಬ ಖ್ಯಾತ ಟಿವಿ ಸುದ್ದಿ ನಿರೂಪಕಿ ತಾನು ದುಡಿಯುತ್ತಿದ್ದ ಮೋದಿ ಮಿಡೀಯಾದ ಭಾಗವಾಗಿದ್ದ ಟಿವಿ ಸಂಸ್ಥೆಗೆ ಗುಡ್ ಬೈ ಹೇಳಿ ತನ್ನ ದಕ್ಷತೆಗೆ ಅನುಗುಣವಾಗಿ ಸರ್ಕಾರದ ಕೆಟ್ಟ ಚಾಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಯಲು ಮಾಡುತ್ತಿದ್ದಾಳೆ. ಮತ್ತೊಂದು ಕಡೆ ಪ್ರಕಾಶ್ ರೈ, ಭವ್ಯ, ಚಿಂತನ್, ಮಹೇಂದ್ರ ಕುಮಾರ್, ಸುಧೀರ್ ಹೀಗೆ ಎಷ್ಟೋ ಜನರು ಸಾಮಾಜಿಕ ಕಾರ್ಯಕರ್ತರಾಗಿ ಪ್ರಾಣಭೀತಿ ಬಿಟ್ಟು ನಮ್ಮ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ಮೊನ್ನೆ ಮೊನ್ನೆ ಸಿಎಎ ವಿರುದ್ಧ ಕವಿತೆಯನ್ನು ವಾಚಿಸಿದ ಕವಿ ಸಿರಾಜ್ ಬಿಸರಳ್ಳಿಯªರ ಮೇಲೆ ಗಂಗಾವತಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇಂತಹ ಹೇಯ ಕೃತ್ಯವನ್ನು ವಿರೋಧಿಸಿ ನೂರಾರು ಕವಿತೆಗಳು ಹುಟ್ಟಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಮ್ಮ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಶ್ರಮಿಸುತ್ತಿರುವ ಎಲ್ಲಾ ಮಹಾನ್ ವ್ಯಕ್ತಿಗಳಿಗೆÉ ನಾವು ಸಲಾಮ್ ಮಾಡದೆ ಇರಲಾಗದು.
ಹೌದು ಮಾತನಾಡುವ ಸಮಯ ಬಂದಿದೆ. ಇಂದು ಮಾತನಾಡುವುದು, ಪ್ರತಿಭಟಿಸೋದು ಎಂದರೆ ರಸ್ತೆಯಲ್ಲಿ ಹೋಗೋ ಮಾರಿಯನ್ನು ಮನೆÀಗೆ ಕರೆದಂತೆ. ಪೆÇಲೀಸರ ಲಾಟಿ ಏಟಿನ ರುಚಿಗೆ ನಾವು ಮೈ ಒಡ್ಡಬೇಕಾಗುತ್ತದೆ, ಸುಳ್ಳು ಅಪಾದನೆಗಳ ಮೇಲೆ ಜೈಲು ಸೇರಬೇಕಾಗುತ್ತದೆ. ಮನೆ ಮಠಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹೊಟ್ಟೆಪಾಡಿಗೆ ಮಾಡುತ್ತಿರುವ ಉದ್ಯೋಗವನ್ನು ಕಳೆದುಕೊಳ್ಳಬೇಕಾಗುತ್ತದೆ. ಹೌದು ಪ್ರಭುತ್ವಕ್ಕೆ ಅಧಿಕಾರದ ಅಮಲು ಏರಿದೆ. ದಾದಾಗಿರಿ ಮಾಡುತ್ತಾ ಮುಗ್ದ ಜನರನ್ನು ಸದೆಬಡಿಯ ಹೊರಟಿದೆ. ಮಾನವೀಯತೆ ಇಲ್ಲದ ಸರ್ಕಾರವು ಉಪಯೋಗಕ್ಕೆ ಬಾರದ ತನ್ನ ಕಾರ್ಯಸೂಚಿಯನ್ನು ದರ್ಪದಿಂದ ಕಾರ್ಯರೂಪಕ್ಕೆ ತರಲು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದೆ. ಉತ್ತಮ ಆಡಳಿತ ನೀಡಲು ವಿಫಲವಾಗಿರುವ ಸರ್ಕಾರ, ಆಡಳಿತ ದಕ್ಷತೆಯನ್ನು ಮೈಗೂಡಿಸಿಕೊಳ್ಳುವಂತಹ ಪ್ರಯತ್ನ ಮಾಡುತ್ತಿಲ್ಲ. ದೇಶದ ಅಭಿವೃದ್ಧಿಗೆ ಬೇಕಾದ ಮಾರ್ಗಸೂಚಿ ಬಗ್ಗೆ ಅದಕ್ಕೆ ಆಳವಾದ ಅರಿವಿಲ್ಲ. ನಮ್ಮ ದೇಶದ ಸಂವಿಧಾನದ ಆತ್ಮಕ್ಕೆ ಧಕ್ಕೆ ತರುವ ಶತಪ್ರಯತ್ನ ನಮ್ಮ ದೇಶದಲ್ಲಿ ನಡೆಯುತ್ತಿದೆ.
ಇಂತಹ ದುಸ್ಥಿತಿಯಲ್ಲಿ ನಾವು ಮಾತನಾಡಬೇಕು. ಮಾತನಾಡದಿದ್ದರೆ ಇತಿಹಾಸ ಪುಟಗಳಲ್ಲಿ ನಾವು ಅಪರಾಧಿಗಳಾಗಿ ಉಳಿದುಬಿಡುತ್ತೇವೆ. ಮಾತನಾಡದೆ ಮೂಕರಾದರೆ ಮುಂದಿನ ಪೀಳಿಗೆ ನಮ್ಮನ್ನು ದೂಷಿಸದೆ ಇರದು. ನಾವೆಲ್ಲ ಅವರ ಮುಂದೆ ಅಪರಾಧಿಗಳಂತೆ ನಿಲ್ಲಬೇಕಾಗುತ್ತದೆ. ಮುಗ್ದರ ಮೇಲೆ ದೌರ್ಜನ್ಯ ಎಸಗುವ ಪ್ರಭುತ್ವದ ವಿರುದ್ಧ ಮಾತನಾಡದೆ ಇದ್ದರೆ ಪಾಪ ಪ್ರಜ್ಞೆ ನಮ್ಮನ್ನು ಕಾಡದೆ ಬಿಡುವುದಿಲ್ಲ.
1948ರ ನವೆಂಬರ್ 4 ರಂದು, ಸಂವಿಧಾನದ ಕರಡು ಪ್ರತಿಯನ್ನು ಮಂಡಿಸುತ್ತಾ ಡಾ. ಅಂಬೇಡ್ಕರ್ ಅವರು ಸಂವಿಧಾನದ ಸ್ವರೂಪವನ್ನು ಬದಲಾಯಿಸದೆಯೇ ಕೇವಲ ಆಡಳಿತಾತ್ಮಕ ಬದಲಾವಣೆಗಳ ಮೂಲಕ, ಅಸಮಂಜಸ ವ್ಯಾಖ್ಯಾನದ ಮೂಲಕ ಸಂವಿಧಾನವನ್ನು ತಿರುಚಲು ಅದರ ಆತ್ಮಕ್ಕೆ ಧಕ್ಕೆ ತರಲು ಸಾಧ್ಯ ಎಂದು ಹೇಳಿದ್ದರು. ಅಂಬೇಡ್ಕರ ಹೇಳಿದಂತೆ ಆಗುತ್ತಿದೆ. ಆದ್ದರಿಂದ ಜನರು ಪ್ರತಿಭಟಿಸುತ್ತಿದ್ದಾರೆ. ಬನ್ನಿ ನಾವು ಮೂಕರಾಗದೆ ಅನ್ಯಾಯವನ್ನು, ಅಸತ್ಯವನ್ನು ಒಕ್ಕೊರಲಿನಿಂದ ಪ್ರತಿಭಟಿಸಿ, ಖಂಡಿಸಿ ನಮ್ಮ ದೇಶವನ್ನು ರಕ್ಷಿಸೋಣ.
ಕೊನೆಗೆ, ದೇಶದ ಮತ್ತು ಸ್ವಾತಂತ್ರ್ಯದ ಕಲ್ಪನೆಯನ್ನು ಬಹಳ ಸೂಕ್ಷ್ಮವಾಗಿ ತೆರೆದಿಡುವ ಅನೇಕ ಕವಿತೆಗÀಳಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ವೇರ್ ಮೈಂಡ್ ಈಸ್ ವಿತೌಟ್ ಫಿಯರ್ ಎಂಬ ಕವಿತೆಯೂ ಒಂದು. ರವೀಂದ್ರನಾಥ ಟ್ಯಾಗೋರ್ ಅವರು ಒಂದು ಸ್ವತಂತ್ರ ದೇಶದ ಗುಣಲಕ್ಷಣಗಳನ್ನು ತಮ್ಮ ಕವಿತೆಯಲ್ಲಿ ಈ ರೀತಿಯಾಗಿ ಪಟ್ಟಿ ಮಾಡುತ್ತಾರೆ:
ದೇಶದಲ್ಲಿ ಜನÀಸಾಮಾನ್ಯರು ತಮ್ಮ ಅನಿಸಿಕೆಗಳನ್ನು ನಿರ್ಭೀತಿಯಿಂದ ಸಾÀರ್ವಜನಿಕವಾಗಿ ವ್ಯಕ್ತಪಡಿಸಬೇಕು. ಜ್ಞಾನವು ಮುಕ್ತವಾಗಿ ಎಲ್ಲರಿಗೂ ಸಿಗುವಂತೆ ಇರಬೇಕು, ದೇಶವು ಜಾತಿ, ಧರ್ಮ, ಲಿಂಗ ಭಾಷೆ ಇತ್ಯಾದಿ ಮಾನವ ನಿರ್ಮಿತ ಸಂಕುಚಿತ ಗೋಡೆಗಳಿಂದ ಬಂಧಿಸ್ಪಟ್ಟಿರಬಾರದು. ಜನರ ದೈನಂದಿನ ಮಾತುಕತೆಯು ಸತ್ಯದ ಆಳದಿಂದ ಮೂಡಿಬರಲಿ, ಜನರು ಕ್ಷುಲ್ಲಕ ವಿಷಯಗಳಿಗಾಗಿ ಜೀವನವನ್ನು ವ್ಯರ್ಥ ಮಾಡದೆ, ಪರಿಪೂರ್ಣ ವ್ಯಕ್ತಿತ್ವ ಸಾಧಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿರಲಿ. ಶುದ್ಧ, ನೂತನ ವಿಚಾರಗಳ ಧಾರೆ ನಿರಂತರವಾಗಿ ಹರಿಯುತ್ತಿರಲಿ. ವಿದ್ಯೆ, ಜ್ಞಾನ ಸಂಪಾದನೆ ಮಾಡಿದಷ್ಟೂ ಮನುಷ್ಯನ ಮನಸ್ಸು ವಿಕಸಿತಗೊಳ್ಳುತ್ತದೆ. ಆಲೋಚನೆ ಮತ್ತು ಕೃತಿಯಲ್ಲಿ ಅದು ಗೋಚರಿಸುವಂತಿರಲಿ. ಈ ಮೇಲಿನ ಎಲ್ಲಾ ಲಕ್ಷಣಗಳಿರುವ ನಿಜ ಅರ್ಥದ ಸ್ವಾತಂತ್ರ್ಯಕ್ಕೆ ನನ್ನ ದೇಶ ಎಚ್ಚರಗೊಳ್ಳಲಿ ಎಂದು ಹಾರೈಸುತ್ತಾರೆ.
ಬನ್ನಿ ಅನ್ಯಾಯವನ್ನು, ಅಸತ್ಯವನ್ನು ಒಕ್ಕೊರಲಿನಿಂದ ಪ್ರತಿಭಟಿಸಿ, ಖಂಡಿಸಿ ಬಹುತ್ವದ ನಮ್ಮ ದೇಶವನ್ನು ರಕ್ಷಿಸಿಕೊಳ್ಳೋಣ. ಇದು ರಾಜಕೀಯ ಸ್ವಾತಂತ್ರದ ಕೂಗಲ್ಲ. ಪರಿಪೂರ್ಣ ಸ್ವಾತಂತ್ರ್ಯದ ಕೂಗು.
0-0-0-0-0-0-0
No comments:
Post a Comment