Saturday, 4 April 2020

ಮದುವೆ ಮತ್ತು ಸಂನ್ಯಾಸದೀಕ್ಷೆ [ಭಾಗ 5)


- ಸಿಎಂಜೆ
----------------
ಮದುವೆ ಅಥವಾ ಸಂನ್ಯಾಸದೀಕ್ಷೆಯನ್ನು ಪಡೆಯುವವರು ಧರ್ಮಸಭೆಯ ಸೇವೆ ಮಾಡುತ್ತಾ ಅದನ್ನು ಬಲವಾಗಿ ಕಟ್ಟಲು ಪಣ ತೊಡುವುದಾಗಿ ವಾಗ್ದಾನ ಮಾಡುತ್ತಾರೆ. 
5. ಮದುವೆ
ಮದುವೆ ಎಂಬುದು ಕೇವಲ ಹೆಣ್ಣು ಗಂಡಿನ ಬಂಧನವಲ್ಲ. 
ಯೇಸುಕ್ರಿಸ್ತರು ತಮ್ಮ ಸಂಗಡಿಗರ ಸೇವೆ ಮಾಡಿ ಧರ್ಮಸಭೆಯನ್ನು ಪ್ರೀತಿಸುವ ಹಾಗೆಯೇ ಗಂಡ ಮತ್ತು ಹೆಂಡತಿ ಒಬ್ಬರನ್ನೊಬ್ಬರು ಪ್ರೀತಿಸುತ್ತಾ ಕ್ರಿಸ್ತನ ಸೇವೆ ಮಾಡುವುದೇ ಮದುವೆ. ಮದುವೆಯ ಮೂಲಕ ಅವರು ಒಬ್ಬರಿಗೊಬ್ಬರು ವಿಶ್ವಾಸದಲ್ಲಿ ನೆಲೆಗೊಳ್ಳಲು ಸಹಕಾರಿಯಾಗುತ್ತಾರೆ, ಒಬ್ಬರಿಗೊಬ್ಬರು ಸೇವೆ ಮಾಡುತ್ತಾ ಧರ್ಮಸಭೆಗೂ ನೆರವಾಗುತ್ತಾರೆ, ಹಾಗೂ ಸಾಯುವವರೆಗೂ ಒಬ್ಬರಿಗೊಬ್ಬರು ಅನ್ಯೋನ್ಯವಾಗಿರುತ್ತಾರೆ. 
ಮದುವೆಯೆಂಬುದು ಸ್ವರ್ಗದಲ್ಲಿ ಲಿಖಿತವಾಗಿರುತ್ತದೆ. ‘ದೇವರು ಕೂಡಿಸಿದ್ದನ್ನು ಮನುಷ್ಯನು ಬೇರ್ಪಡಿಲಾಗದು’ ಎಂದಿದ್ದಾರೆ ಯೇಸುಸ್ವಾಮಿ. ಆದ್ದರಿಂದ ಕ್ರೈಸ್ತ ಧರ್ಮವು ವಿಚ್ಛೇದನವನ್ನು ಒಪ್ಪಿಕೊಳ್ಳುವುದಿಲ್ಲ. ವಿಚ್ಛೇದನ ಕೋರಿ ಬರುವವರನ್ನು ಹಲವು ಸುತ್ತಿನ ಸಮಾಲೋಚನೆಗಳ ಮೂಲಕ ಮತ್ತೆ ಒಂದುಗೂಡಿಸುವ ಶತಪ್ರಯತ್ನ ಮಾಡಲಾಗುತ್ತದೆ. ಆದರೂ ಮದುವೆಯಾದ ಗಂಡು ಹೆಣ್ಣು ಒಂದಾಗಿ ಬಾಳುವುದು ಸಾಧ್ಯವೇ ಇಲ್ಲ ಎಂದು ಖಾತರಿಯಾದಾಗ ಅಂಥ ಮದುವೆಯನ್ನು ‘ರದ್ದುಗೊಳಿಸುತ್ತದೆ’ ಹೊರತು ವಿಚ್ಛೇದನೆ ಘೋಷಿಸುವುದಿಲ್ಲ. ಅವರು ಯಾವ ದೇವಾಲಯದಲ್ಲಿ ಮದುವೆಯಾದರೋ ಅಲ್ಲಿನ ಮದುವೆಯ ರಿಜಿಸ್ಟ್ರಿಯಲ್ಲಿ ಹುಡುಗ ಅಥವಾ ಹುಡುಗಿ ಮದುವೆಯಾಗುವ ಇಂಗಿತವನ್ನು ಸಂಪೂರ್ಣವಾಗಿ ವ್ಯಕ್ತಪಡಿಸದ ಕಾರಣ ಈ ಮದುವೆ ಊರ್ಜಿತವಲ್ಲ. (ಒಚಿಡಿಡಿiಚಿge hಚಿs ಟಿoಣ ಣಚಿಞeಟಿ ಠಿಟಚಿಛಿe beಛಿಚಿuse iಣ ತಿಚಿs ಟಿoಣ ಜಿಡಿom heಚಿಡಿಣ ಚಿಟಿಜ souಟ.) ‘ಈ ವಿವಾಹ ಅಸಿಂಧು’ ಎಂದು ಕೆಂಪುಬಣ್ಣದಲ್ಲಿ ಷರಾ ಎಳೆಯಲಾಗುತ್ತದೆ. 
ವಿವಾಹ ರದ್ದಾದ ಮಾತ್ರಕ್ಕೆ ಅವರು ಇನ್ನೊಂದು ಮದುವೆಗೆ          ಯೋಗ್ಯರು ಎಂದು ಭಾವಿಸಬಾರದು. ಈ ಕಾರಣದಿಂದ ಮದುವೆಗೆ ಮೊದಲೇ ಹುಡುಗ ಹುಡುಗಿ ಯನ್ನು ಎಲ್ಲ ರೀತಿಯಿಂದಲೂ ಪರೀಕ್ಷಿಸುವುದು ಒಳ್ಳಿತು. 
ಚಿಕ್ಕವಯಸ್ಸಿನಲ್ಲಿ ಗಂಡ ಅಥವಾ ಹೆಂಡತಿ ಸತ್ತರೆ ಬದುಕಿರುವವರು ಇನ್ನೊಂದು ಮದುವೆಯಾಗುವುದನ್ನು ಧರ್ಮಸಭೆಯು ಮಾನ್ಯ ಮಾಡುತ್ತದೆ. ಏಕೆಂದರೆ ಒಬ್ಬರ ಮರಣದಿಂದ ಮದುವೆಯ ಒಪ್ಪಂದವು ತಾನಾಗಿ ರದ್ದಾಗುತ್ತದೆ.
ದೇವರ ಹತ್ತು ಕಟ್ಟಳೆಗಳಲ್ಲಿ ವ್ಯಭಿಚಾರವು ಘೋರಪಾಪ. ಒಂದು ಮದುವೆಯಾಗಿ ಬೇರೆಯಾದವರನ್ನು ಮತ್ತೊಬ್ಬರು ಮದುವೆಯಾದರೆ ಅದು ವ್ಯಭಿಚಾರವಾಗುತ್ತದೆಂದು 
ಯೇಸುಸ್ವಾಮಿ ಹೇಳಿದ್ದಾರೆ. ಕೃತಕಗರ್ಭಾಂಕುರ, ಭ್ರೂಣಹತ್ಯೆ, ಗರ್ಭತಡೆವ ಸಾಧನಗಳ ಬಳಕೆ ಇವೆಲ್ಲ ಘೋರಪಾಪದ ಪರಿಧಿಯಲ್ಲೇ ಬರುತ್ತವೆ. ಮದುವೆಯೆಂಬುದು ಪವಿತ್ರ ಬಂಧನ. ಗಂಡನಾಗಲೀ ಹೆಂಡತಿಯಾಗಲೀ ಆ ಬಂಧನಕ್ಕೆ ಚ್ಯುತಿಯಾಗದಂತೆ ಜೀವಿಸಿ ಧರ್ಮಸಭೆಗೆ ಮಕ್ಕಳನ್ನು ಕೊಡಬೇಕು ಹಾಗೂ ಅವರನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಧರ್ಮಸಭೆ ಬಯಸುತ್ತದೆ.
6. ಯಾಜಕ ಸೇವೆ
ದೇವರಿಂದ ಕರೆಯಲ್ಪಟ್ಟು ತಾನು ಗುರುಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎನ್ನುವವರಿಗೆ ಈ ಸಂಸ್ಕಾರವನ್ನು ಪ್ರದಾನಿಸಲಾಗುತ್ತದೆ. ವಿಧ್ಯುಕ್ತ ಯಾಜಕಾಭಿಷೇಕ ಪಡೆದು ಅವರು ಪವಿತ್ರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಾ ಧರ್ಮಸಭೆಯ ಮತ್ತು ಸಮುದಾಯದ ಸೇವೆ ಮಾಡ ತೊಡಗುತ್ತಾರೆ. ‘ನೀವು ದೇವರು ಆಯ್ದುಕೊಂಡ ಜನಾಂಗ; ರಾಜಯಾಜಕರು, ಪವಿತ್ರ ಪ್ರಜೆ, ದೇವರ ಸ್ವಕೀಯ ಜನ; ಅವರ ಅದ್ಭುತ ಕಾರ್ಯಗಳನ್ನು ಪ್ರಚುರ ಪಡಿಸುವುದಕ್ಕಾಗಿಯೇ ಆಯ್ಕೆಯಾದವರು’ (1 ಪೇತ್ರ 2: 9)
ಧರ್ಮಸಭೆಯಲ್ಲಿ ಯೇಸುಕ್ರಿಸ್ತನೇ ಕೇಂದ್ರವ್ಯಕ್ತಿ ಆಗಿರುವಂತೆ ಸಮುದಾಯದ ಕ್ರಿಸ್ತೀಯ ಜೀವನದಲ್ಲಿ ಗುರುಗಳು ಕೇಂದ್ರವ್ಯಕ್ತಿಯಾಗಿರುತ್ತಾರೆ.  ಯೇಸುಸ್ವಾಮಿಯೇ ಹೇಳಿದ ಪ್ರಕಾರ ‘ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು, ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು’ (ಮತ್ತಾಯ 16:18). ಪ್ರತಿದಿನವೂ ಕ್ರಿಸ್ತನ ಬಲಿಯಜ್ಞ ನಡೆಸುವುದರಿಂದ ಅವರು ಯಾಜಕರು. ಜನಸಾಮಾನ್ಯರಿಗೆ ಅಗತ್ಯವಾದ ಆಧ್ಯಾತ್ಮಿಕ ಪೆÇೀಷಣೆಗಳನ್ನು ಅಂದರೆ ಯೇಸುಕ್ರಿಸ್ತನ ಪ್ರತಿನಿಧಿಗಳಾಗಿ ಯಾವುದೇ ಪ್ರಲೋಭನೆ, ದುರಾಸೆ, ಲೈಂಗಿಕ ಆಸಕ್ತಿಯನ್ನು ಮೀರಿದವರಾಗಿ,  ಕ್ರಿಸ್ತೀಯ ಸಂಸ್ಕಾರಗಳೆಲ್ಲವನ್ನೂ ನೀಡುವ ಪ್ರಮುಖ ವ್ಯಕ್ತಿ ಇವರೇ. ಧರ್ಮದ ಬೋಧಕರಾಗಿ, ಒಳ್ಳೆಯ ಶಿಕ್ಷಕರಾಗಿ, ವ್ಯಾಜ್ಯಗಳ ನ್ಯಾಯಾಧೀಶರಾಗಿ, ಮುನ್ನಡೆಸುವ ಮುಂದಾಳಾಗಿ, ಸಂತೈಸುವ ಗೆಳೆಯನಾಗಿ, ದಾರಿತಪ್ಪಿದಾಗ ಮಾರ್ಗದರ್ಶಕನಾಗಿ, ಮದುವೆಯ ಪುರೋಹಿತನಾಗಿ, ಒಡೆದ ಮನಸುಗಳ ಬೆಸೆಯುವ ಶಕ್ತಿಯಾಗಿ, ಅವರು ಸಮಾಜಕ್ಕೆ ಮಾದರಿಯಾಗುತ್ತಾರೆ. (ಎಕ್ಲೆಸಿಯಾ ಸುಪ್ಲೆತ್). ನಮ್ಮ ಸೇವೆ ಮಾಡಲೆಂದೇ ಎಲ್ಲವನ್ನೂ ತ್ಯಜಿಸಿ ಬಂದಿರುವ ಅವರನ್ನು ನಾವು ಆಪ್ತವಾಗಿ ಕಂಡು ಅವರ ಸಂದಿಗ್ದತೆಗಳಲ್ಲಿ ಅವರೊಂದಿಗೆ ಕೈಜೋಡಿಸುವುದು ಹಾಗೂ ಅನಾರೋಗ್ಯದಲ್ಲಿ ಸಂತೈಸುವುದು ಒಳ್ಳೆಯದು. 
ಗುರುಗಳು ಸದಾ ಕಾಲವೂ ತಮ್ಮ ಧರ್ಮಕೇಂದ್ರದಲ್ಲಿ ಲಭ್ಯರಿರಬೇಕು. ತಮ್ಮ ಸುಪರ್ದಿಯ ಜನರ ಆಧ್ಯಾತ್ಮಿಕ ಪೆÇೀಷಣೆಯನ್ನು ಗಮನಿಸುವುದರ ಜೊತೆಗೆ ಪ್ರತಿ ಕುಟುಂಬವನ್ನೂ ಸಂದರ್ಶಿಸಿ ಅವರಲ್ಲೊಬ್ಬನಾಗಬೇಕು. ವ್ಯಾಧಿಸ್ಥರ ಅಭ್ಯಂಗ ಮತ್ತು ಭಕ್ತಾದಿಗಳ ಮರಣದ ಸಂದರ್ಭದಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಹಾಜರಿರಬೇಕು. ದೇವಾಲಯದಿಂದ ದೂರ ಸರಿದ ಭಕ್ತಾದಿಗಳನ್ನು ಸಂತೈಸಿ ಮತ್ತೆ ಅವರನ್ನು ಸರಿದಾರಿಗೆ ತರಬೇಕು. ದೇವಾಲಯ ಆರ್ಥಿಕ ಲೆಕ್ಕಾಚಾರವನ್ನು ಭಕ್ತಾದಿಗಳಿಗೆ ಬಹಿರಂಗವಾಗಿ ತಿಳಿಸಬೇಕು. ಕ್ಯಾನನ್ 537 ಪ್ರಕಾರ ಒಂದು ಆರ್ಥಿಕ ಸಮಿತಿಯನ್ನು ನೇಮಿಸಿಕೊಳ್ಳುವುದು ಒಳ್ಳೆಯದು. ಯಾವುದೇ ಆಚರಣೆ, ನವೀಕರಣ, ಬದಲಾವಣೆ ಮುಂತಾದವುಗಳಲ್ಲಿ ಭಕ್ತಾದಿಗಳನ್ನು ಪ್ರೀತಿಯಿಂದ ಒಳಗೊಳ್ಳಬೇಕು. ಏಕೆಂದರೆ ‘ಪ್ರಭು ತಮ್ಮ ಸ್ವಂತ ರಕ್ತ ಸುರಿಸಿ ಸಂಪಾದಿಸಿದ ಧರ್ಮಸಭೆಗೆ ಉತ್ತಮ ಕುರಿಗಾಹಿಗಳಾಗಿರಿ’ (ಪ್ರೇ.ಕಾ 20:28).
ಅದೇ ರೀತಿಯಲ್ಲಿ ನಾವೆಲ್ಲರೂ ಪಾದ್ರಿಯವರ ಮಾರ್ಗದರ್ಶನದಲ್ಲಿ ದೇವಾಲಯದ ಕೆಲಸಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಆಗಾಗ್ಗೆ ದೇವಾಲಯಕ್ಕೆ ಭೇಟಿ ನೀಡುವುದು, ಪೂಜೆ ಒತ್ತಾಸೆ ಮಾಡುವುದು, ಪರಮ ಪ್ರಸಾದ ಹಂಚಲು ಸಹಕರಿಸುವುದು, ಪೂಜಾಪಾತ್ರೆಗಳನ್ನು ಶುಚಿಗೊಳಿಸುವುದು, ಪೀಠವನ್ನು ಅಲಂಕರಿಸುವುದು, ದೇವಾಲಯದ ಹೂಗಿಡಗಳಿಗೆ ನೀರುಣಿಸುವುದು, ಕಸ ಗುಡಿಸುವುದು, ದೂಳು ಒರೆಸುವುದು, ಪೀಠೋಪಕರಣಗಳನ್ನು ಜೋಡಿಸುವುದು, ಅಂಗಳಕ್ಕೆ ನೀರೆರಚಿ ರಂಗೋಲಿ ಹಾಕುವುದು, ತೋರಣ ಕಟ್ಟುವುದು, ಕಾಲಕಾಲಕ್ಕೆ ಗಂಟೆ ಹೊಡೆಯುವುದು, ಗಾನವೃಂದಗಳನ್ನು ಮುನ್ನಡೆಸುವುದು, ಹಾಡುಗಳನ್ನು ಮುದ್ರಿಸುವುದು, ಪ್ರಾರ್ಥನೆ ಆರಾಧನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಹಾಗೂ ದಾನಧರ್ಮಗಳನ್ನು ಮಾಡುವುದರ ಮೂಲಕ ಧರ್ಮಸಭೆಗೆ ನಮ್ಮ ಭಾದ್ಯತೆಗಳನ್ನು ಪೂರೈಸಬೇಕು. (ಕ್ಯಾನನ್ 1262).

**********

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...