Saturday, 4 April 2020

ಮೌನದ ದನಿ

----
- ಉಮರ್ ದೇವರಮನಿ

ಹುಡುಕಿಕೊಂಡು ಬಂದೇ ಬರುವೆ ಒಂದು
ಅಸ್ತ್ರಗಳನ್ನು ಕೆಳಗಿಟ್ಟು ಬಿಡುವೆ ಒಂದು ದಿನ

ಹತ್ತಿರವಿದ್ದರೂ ಹೀಗೆ ದೂರ ನಿಲ್ಲುವೆಯಲ್ಲ
ಆ ಆಹಂ ಕರಗುವುದಿಲ್ಲವೆ ಒಂದು ದಿನ

ನಂಬಿದ ತನು ಮನ ಧನ ಅಧಿಕಾರವೆಲ್ಲಿ
ಹುಸಿಯು ನುಸಿಯಾಗಲಿಲ್ಲವೆ ಒಂದು ದಿನ

ಎಲ್ಲೆಲ್ಲೂ ಹುಡುಕಿ ಇಲ್ಲವಾದೆ ಪ್ರೀತಿಯನು
ನಿನ್ನಲಿ ನೀನು ಹುಡಕಲಿಲ್ಲವೆ ಒಂದು ದಿನ

ಈ ಒಳಗಿನ ಒಂಡನು ಕಲಕಬೇಡ ಉಮರ್
ನಾಲಗೆ ಅಮೃತ ಸವಿಯಲಿಲ್ಲವೆ ಒಂದು ದಿನ
————————————
ಮಳೆ ನಿಂತರೂ ಹನಿ ಮೂಡುವುದು ಏಕೆ
ನೀನು ಬಂದರೂ ಬಾರದ ಭಾವವು ಏಕೆ

ಮೋಡ ಸುರಿದು ನದಿಸಾಗರ ತುಂಬಿದರೂ
ಹನಿಗಳು ಕಾದು ಆವಿಯಾಗುವುದು ಏಕೆ

ಮಣ್ಣು ಹದಗೊಳಿಸಿ ಬಿತ್ತಿದ್ದೇನೋ ನಿಜ
ಬೀಜ ಮರವಾಗಿ ಹೀಗೆ ಒಣಗುವುದು ಏಕೆ

ಮುಗಿಯುತ್ತಿಲ್ಲ ಎಷ್ಟು ನಡೆದರೂ ದಾರಿ
ಗುರಿ ಮುಟ್ಟಿದರೂ ಉದ್ದೇಶ ಉಳಿಯುವುದು ಏಕೆ

ಉಮರ್ ಇದ್ದಾನೋ ಇಲ್ಲವೋ ನಾನರಿಯೇ
ಅವನ ನೆನಪುಗಳು ಹೀಗೆ ಕಾಡುವುದು ಏಕೆ

**********

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...