Saturday, 4 April 2020

ರೋಗಾಣುಗಳು...

ಡೇವಿಡ್ ಕುಮಾರ್. ಎ
-------------------------
ಶಂಖ, ಘಂಟೆ, ಜಾಗಟೆ,
ಸೀನು, ಕೆಮ್ಮು, ನೆಗಡಿ?
ಯಾಕೋ ತಾಳೆಯಾಗುತ್ತಿಲ್ಲ!

ಯುದ್ಧ, ಪ್ರತಿಷ್ಠೆ, ಪ್ರತಿಮೆ,
ರೋಗ, ಹಸಿವು, ಸಾವು?
ಯಾಕೋ ಸರಿದೂಗುತ್ತಿಲ್ಲ!

ಮಂದಿರ, ಮಸೀದಿ, ಇಗರ್ಜಿ,
ಕೋಮು, ದ್ವೇಷ, ಹತ್ಯೆ...
ಯಾಕೋ ಹೊಂದಿದಂತಿಲ್ಲ !

ದವಾಖಾನೆ, ವೈದ್ಯರು, ಔಷಧ,
ರೋಗಾಣು, ಮೃತ್ಯು, ಆತಂಕ...
ಯಾಕೋ ಸಾಟಿಯಾಗಿಲ್ಲ!
-----------------------------

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...