Monday, 13 April 2020

ಡಾ. ಬಿ.ಆರ್ ಅಂಬೇಡ್ಕರ್; ದಮನಿತ ಶಕ್ತಿಯ ಸಂಭಾವ್ಯತೆಯ ರೂಪಕ



ಅಂಬೇಡ್ಕರ್ರವರ ಜೀವನಾಧರಿತ ಒಂದು ಚಲನಚಿತ್ರ ನೋಡಬೇಕೆಂಬ ಮಹಾದಾಸೆಯಿಂದ ಯುಟ್ಯೂಬ್ನ ಲ್ಲಿ ಹುಡುಕುವಾಗ, ಕಳೆದ ಏಪ್ರಿಲ್ ತಿಂಗಳಲ್ಲಿ ಅಂಬೇಡ್ಕರ್ ಅವರ ನೂರಿಪ್ಪತ್ತೈದನೆಯ ಜನ್ಮದಿನಾಚರಣೆಯ ಪ್ರಯುಕ್ತ ಬಿ.ಎಂ.ಗಿರಿರಾಜ್ ಅವರಸತ್ಯಶೋಧಕಎಂಬ ವಿಡಿಯೊ ಮಾಲಿಕೆಯಲ್ಲಿ ಅಂಬೇಡ್ಕರ್ರ್ವರ ಸಾಧನೆಗಳನ್ನು ವಿವರಿಸುವ ವಿಡಿಯೋ ನನ್ನ ಕಣ್ಣಿಗೆ ಬಿತ್ತು. ಅಂಬೇಡ್ಕರ್ರ್ವರ ಸಾಧನೆಗಳನ್ನು ಪಟ್ಟಿ ಮಾಡುವ ವಿಡಿಯೋ ಆರಂಭವಾಗುವುದೇ ಒಂದು ಪ್ರಶ್ನೆಯಿಂದ; who was Dr. Ambedkara? ಕೆಲವರಿಗೆ ಯಾರಿಗೂ reservation ಕೊಟ್ಟರಂತೆ SC/STಗಳಿಗೆ.. but is that it?.. ಪ್ರಶ್ನೆಯ ಉತ್ತರವಾಗಿ ತೆರೆದುಕೊಳ್ಳುವುದೇ ಅಂಬೇಡ್ಕರ್ರ ವರ ಅಸಾಮಾನ್ಯ ಸಾಧನೆಗಳು: ಉದ್ಯೋಗದಲ್ಲಿರುವವರು ಒಂಬತ್ತರಿಂದ ಐದರವರೆಗೆ ಕೆಲಸ ಮಾಡುವುದರ ಬಗೆಗಿನ ಪ್ರಸ್ತಾಪವನ್ನು ಮೊದಲು ಇಂಡಿಯಾದಲ್ಲಿ ಮಂಡಿಸಿದವರು ಅಂಬೇಡ್ಕರ್; ಬ್ರಿಟಿಷ್ ಆಡಳಿತದ ಕಾಲದಲ್ಲಿ ಉದ್ಯೋಗಸ್ಥರು ಹನ್ನೆರಡು ಗಂಟೆ ಕೆಲಸ ಮಾಡಬೇಕಾಗಿತ್ತು. ಇವತ್ತು ಉದ್ಯೋಗಸ್ಥರು ಅನುಭವಿಸುತ್ತಿರುವ ಪ್ರಾವಿಡೆಂಟ್ ಫಂಡ್, ಡಿ.., ಹೆರಿಗ ರಜೆ, ಆಸ್ತಿಹಕ್ಕುಗಳು ಇವೆಲ್ಲ ಇಲ್ಲಿ ಬಂದದ್ದು ಬಾಬಾ ಸಾಹೇಬರ ಪ್ರಯತ್ನದಿಂದ. ಹಿರಾಕುಡ್, ಭಾಕ್ರಾನಂಗಲ್ ತರಹದ ಅಣೆಕಟ್ಟೆಗಳು ಅಂಬೇಡ್ಕರ್ ದೂರದೃಷ್ಟಿಯಿಂದ ನಿರ್ಮಾಣಗೊಂಡವು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುರುವಾಗಲು ಅಂಬೇಡ್ಕರ್ ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಬರೆದಪ್ರಾಬ್ಲಂ ಆಫ್ ಇಂಡಿಯನ್ ರುಪೀ ಎಂಬ ಸಂಶೋಧನಾ ಪ್ರಬಂಧದ ಪ್ರೇರಣೆ ಕಾರಣ. ಅಮರ್ತ್ಯಸೇನ್ಗೆ ನೊಬೆಲ್ ಬಂದಾಗ ಅವರು ಹೇಳಿದ ಮಾತು: ‘ನಾನು ಹೊಸತೇನನ್ನೂ ಮಾಡಿಲ್ಲ; ಬಾಬಾಸಾಹೇಬರ ಆರ್ಥಿಕ ಸಿದ್ಧಾಂತಗಳನ್ನು ವಿಸ್ತರಿಸಿದ್ದೇನೆ, ಅಷ್ಟೆ.’ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ತನ್ನ 250 ವರ್ಷಗಳ ಚರಿತ್ರೆಯಲ್ಲಿಶ್ರೇಷ್ಠ ವಿದ್ಯಾರ್ಥಿ ಯಾರು?’ ಎಂದು ಹುಡುಕಿದಾಗ ಅವರಿಗೆ ಕಂಡದ್ದು ಅಂಬೇಡ್ಕರ್ ಹೀಗೆ ಅಂಬೇಡ್ಕರ್ರಯವರ ಅಸಾಮಾನ್ಯ ಸಾಧನೆಗಳನ್ನು ವಿಭಿನ್ನವಾಗಿ ಪಟ್ಟಿ ಮಾಡುತ್ತಾ ಹೋಗುತ್ತಾರೆ ಖ್ಯಾತ ಚಲನಚಿತ್ರ ನಿರ್ದೇಶಕರಾದ ಬಿ.ಎಂ.ಗಿರಿರಾಜ್ರೆವರು. ಇನ್ನೊಂದು ಕಡೆ, ಡಾ. ಆಂಬೇಡ್ಕರ್ ದರ್ಶನ ಎಂಬ ಪುಸ್ತಕದಲ್ಲಿ ಬಿ.ಆರ್ ಅಂಬೇಡ್ಕರ್ರದವರ ಸಾಧನೆಗಳನ್ನು ಲೇಖಕ ಎನ್ ಆರ್ ಶಿವರಾಂ ರೀತಿಯಾಗಿ ಪಟ್ಟಿ ಮಾಡುತ್ತಾರೆ:
ವಿಶ್ವವಿಖ್ಯಾತ ವಿಶ್ವವಿದ್ಯಾನಿಲಯಗಳಾದ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ, ಬ್ರಿಟನ್ನೆ ಆಕ್ಸ್ಪ.ರ್ಡ್, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಮತ್ತು ಜರ್ಮನಿಯ ಭಾನ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದ ಮೊಟ್ಟ ಮೊದಲ ಭಾರತೀಯ ಡಾ. ಬಿ.ಆರ್ ಅಂಬೇಡ್ಕರ್.
ಇಂದಿಗೂ ಸಹ ಡಾ. ಬಿ.ಆರ್ ಅಂಬೇಡ್ಕರ್ ಅವರಷ್ಟು ವಿದ್ಯಾಭ್ಯಾಸ ಮಾಡಿದ ಹಾಗೂ ಸಂಶೋಧನಾ ಗ್ರಂಥಗಳನ್ನು ರಚಿಸಿದ ವ್ಯಕ್ತಿ ಇಡೀ ವಿಶ್ವದಲ್ಲೇ ಇಲ್ಲ !
ಜಗತ್ತಿನ ೧೦೦ ಜನ ಮಹಾನ್ ಪ್ರತಿಭಾವಂತರ ಪಟ್ಟಿಯಲ್ಲಿ ಭಾರತದ ಡಾ.ಬಿ.ಆರ್ ಅಂಬೇಡ್ಕರ್ರಗವರು ಮೊದಲನೇ ಸ್ಥಾನದಲ್ಲಿದ್ದಾರೆ ಎಂದು ಅಂತಾರಾಷ್ಟ್ರೀಯ ಸಂಶೋಧನೆಯು ದೃಢಪಡಿಸಿದೆ. ಕಾನೂನಿನ ವಿಷಯದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಗಿದ್ದ ಪಾಂಡಿತ್ಯಕ್ಕಾಗಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೆಸರಿಡಲಾಗಿದೆ. ವಿಶ್ವವಿಖ್ಯಾತ ಗ್ರಂಥಾಲಯವಾದ ಲಂಡನ್ ಮ್ಯೂಸಿಯಂ ಲೈಬ್ರರಿಯಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಪಡೆದು ಅಧ್ಯಯನ ಮಾಡಿದ್ದಕ್ಕಾಗಿ ಗ್ರಂಥಾಲಯದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನು ಬರೆಯಲಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದ ಮಾನವ ಹಕ್ಕುಗಳು ವಿಶ್ವಸಂಸ್ಥೆಯಲ್ಲಿ ಪ್ರಶಂಸೆಗೊಳಪಟ್ಟು ಅಂಗೀಕಾರಗೊಂಡಿವೆ. ಡಾ. ಬಿ.ಆರ್ ಅಂಬೇಡ್ಕರ್ ಅವರು ರಚಿಸಿರುವ ನಮ್ಮ ಸಂವಿಧಾನವು ವಿಶ್ವದಲ್ಲೇ ಅತ್ಯುತ್ಯಮ ಸಂವಿಧಾನ ಎಂಬ ಹೆಗ್ಗಳಿಕೆ ಗಳಿಸಿದೆ. ಇಂತಹ ಪ್ರತಿಭಾವಂತ ಮೇರು ವ್ಯಕ್ತಿ ನಮ್ಮ ಭಾರತೀಯ ಎಂಬುವುದಕ್ಕೆ ಇಡೀ ಭಾರತ ದೇಶವೇ ಹೆಮ್ಮೆ ಪಡಬೇಕು. (ಎನ್ ಆರ್ ಶಿವರಾಂ, ಡಾ. ಬಿ.ಆರ್ ಅಂಬೇಡ್ಕರ್ ದರ್ಶನ)
ಕೊನೆಗೆ ಎಲ್ಲಾ ಸಾಧನೆಗಳು ಸಾಧಿಸಿದ್ದು ಒಂದು ಶೋಷಿತ ಸಮುದಾಯದಲ್ಲಿ ಹುಟ್ಟಿ ಬೆಳೆದ ಬಿ.ಆರ್ ಅಂಬೇಡ್ಕರ್ರಲವರು. ಶೋಷಿತ ಸಮುದಾಯಗಳ ವಿಮೋಚನೆಯ ಗುರಿಯೇ ಅವರ ಎಲ್ಲಾ ಮಹೋನ್ನತ ಸಾಧನೆಗಳಿಗೆ ಪ್ರೇರಣೆ. “ ನಿಮ್ಮ ಹಣೆ ಬರಹದ ಮೇಲೆ ನಂಬಿಕೆ ಇಡಬೇಡಿ, ನಿಮ್ಮ ಸ್ವಶಕ್ತಿಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ನಿಮ್ಮಲ್ಲಿ ನಿಮಗೆ ಆತ್ಮವಿಶ್ವಾಸವಿರಲಿ. ನಿಮ್ಮ ಉದ್ಧಾರ ನಿಮ್ಮ ಕೈಯ್ಯಲ್ಲೇ ಇದೆ. ದೇವರು, ಧರ್ಮ ಅಥವಾ ಮಹಾತ್ಮರಾರೂ ನಿಮ್ಮನ್ನು ಉದ್ಧಾರ ಮಾಡಲಾರರು ಎಂಬ ಬಿ.ಆರ್ ಅಂಬೇಡ್ಕರ್‍‍ರವರ ಬುದ್ಧಿ ಮಾತುಮಾತು ನಮ್ಮಲ್ಲಿ ಸಕಾರಗೊಳ್ಳಲಿ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...