ಒಂದು ಕ್ಷಣದ ಮಿಂಚಿನ ಹೊಳಪೆನ್ನ
ಕಂಗಳ ಆಳ ಕತ್ತಲನು ಎಳೆದು ಹಾಕಿದೆ,
ನನ್ನ ಹೃದಯವದು ರಾತ್ರಿಯ ಆ ಹಂಸಗಾನ ತೇಲಿಬಂದ ದಾರಿಯನು ತಡಕುತಿದೆ.
ಬೆಳಕು, ಓ ಎಲ್ಲಿದೆ ಬೆಳಕು?
ಹಚ್ಚದನು ಬಯಕೆಯ ಉರಿಯಿಂದ.
ಅದು ಸಿಡಿಲೊಡೆದು ಚಂಡಮಾರುತವು ಶೂನ್ಯದೊಳಗೆಲ್ಲ ಆವರಿಸಲಿ.
ಇರುಳದು ಕರಿಬಂಡೆಯಂತಿಹುದು.
ಈ ರಾತ್ರಿಯೊಳು ಗಂಟೆಗಳುರುಳದಿರಲಿ.
ನಿನ್ನುಸಿರಿನಿಂ ಪ್ರೇಮದೀಪವ ಬೆಳಗು.
(ಟ್ಯಾಗೋರರ ಂA moment's flash of lightning drags down a deeper gloom on my sight ಕವನದ ಭಾವಾನುವಾದ: ಸಿ ಮರಿಜೋಸೆಫ್)
-0-0-0-0-
No comments:
Post a Comment