---------------------
ಒಬ್ಬನದಲ್ಲ ಇಬ್ಬರದು
- ಖಲೀಲ್ ಗಿಬ್ರಾನ್
ಕ್ರಿಸ್ತ,
ನೀನು ಶಿಲುಬೆಗೇರಿದ್ದು
ಆ ಕಂಬದ ಮೇಲಲ್ಲ
ನನ್ನ ಹೃದಯದ ಮೇಲೆ
ನಿನ್ನ ಕೈಯೊಳಗೆ
ಹೊಕ್ಕ ಮೊಳೆಗಳು
ನನ್ನ ಹೃದಯದೊಳಗೂ ಹೊಕ್ಕಿವೆ
ಈ ಗೊಲ್ಗೊಥದ ಬಳಿ ನಾಳೆ
ಹಾದು ಹೋಗುವ ದಾರಿಹೋಕನಿಗೆ
ಇಲ್ಲಿ ನಮಿಬ್ಬರ ನೆತ್ತರು ಹರಿದಿದೆಯೆಂದು
ತಿಳಿಯುವುದಿಲ್ಲ
ಅದು ನಿನ್ನೊಬ್ಬನದೇ ಎಂದು
ತಿಳಿಯುವನು ಆತ
ಅನುವಾದ : ಸ್ವೀಟಿ ಕಲಾಂಜಲಿ
----------------------
ನಜರೇತಿನ ಕಲ್ಲುಗಳು
- ಖಲೀಲ್ ಗಿಬ್ರಾನ್
ನಜರೇತ್ ಬೆತ್ಲೆಹೇಮ್
ಟೈರ್, ಟ್ರಿಫೋಲಿ
ಬಾಲ್‍ಚೆಕ್ ಡಮಾಸ್ಕಸ್
ಅಲೆಪ್ಸೊ ಪಾಮ್ಯೆರ್
ಇವೆಲ್ಲಾ ಓಡಾಡಿ ಕುಣಿದು
ಕುಪ್ಪಳಿಸಿದ್ದು ಅದೆಷ್ಟೋ !
ಆದರೆ, ನಜರೇತಿನ ಕಲ್ಲುಗಳ
ಮೇಲೆ ನಿಂತಾಗ ನನ್ನ
ಕಾಲುಗಳು ನಡುಗುತ್ತಿದ್ದವು
ಅನುವಾದ : ಬೆನೆಟ್ ಅಮನ್ನ
ಕ್ರಿಸ್ತ ಕಾವ್ಯ, ಪುಟಗಳು – 267/ 276
No comments:
Post a Comment